ಡಿವಿಜಿ ಸುದ್ದಿ, ಬೆಂಗಳೂರು: ದೊರೆಸ್ವಾಮಿ ಅವರು ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿರೋಧಿಸಿ ಸದನದಲ್ಲಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಎದ್ದು ನಿಂತ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ, 100 ತುಂಬಿದ ರಾಜಕಾರಣಿ ಎಂದು ಎಡವಟ್ಟು ಮಾಡಿಕೊಂಡರು.
ರೇವಣ್ಣ ಅವರು ದೊರೆಸ್ವಾಮಿ ಅವರಿಗೆ ನೂರು ತುಂಬಿದ ರಾಜಕಾರಣಿ ಎನ್ನುತ್ತಲೇ.. ಬಿಜೆಪಿ ಶಾಸಕರು. ಹೋ ಎಂದು ಕೂಗಿದರು.. ತಮ್ಮ ತಪ್ಪು ಗಮನಕ್ಕೆ ಬಂದ ಕೂಡಲೇ ರೇವಣ್ಣ, ದೊರೆಸ್ವಾಮಿ ರಾಜಕಾರಣಿ ಅಲ್ಲ, ಸ್ವಾತಂತ್ರ್ಯ ಹೋರಾಟಗಾರ ಎಂದರು.
ಆಗ ಬಿಜೆಪಿ ಶಾಸಕರೊಬ್ಬರು ಸರಿಯಾಗಿ ಹೇಳಿದ್ದೀರಿ, ಅವರು ರಾಜಕಾರಣಿಯೇ ಆಗಿದ್ದಾರೆ ಎಂದಾಗ ಸದನದಲ್ಲಿ ಗದ್ದಲ ಉಂಟಾಯಿತು.



