ಡಿವಿಜಿ ಸುದ್ದಿ, ಚಿಕ್ಕೋಡಿ: ಸೋತವರಿಗೆಲ್ಲ ಮಂತ್ರಿ ಸ್ಥಾನ ಕೊಡದು ಸರಿಯಲ್ಲ. ಸೋತವರಿಗೆ ಮಂತ್ರಿ ಸ್ಥಾನ ಕೊಡುವುದಾದರೆ ಚುನಾವಣೆ ಯಾಕೆ ಬೇಕು ಎಂದು ಹುಕ್ಕೇರಿ ಶಾಸಕ , ಮಾಜಿ ಸಚಿವ ಉಮೇಶ್ ಕತ್ತಿ ಕಿಡಿಕಾರಿದ್ದಾರೆ.
ಹುಕ್ಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೈ ತಪ್ಪಿದ ಬಗ್ಗೆ ಪ್ರತಿಕ್ರಿಯಿಸಿ. ಸಚಿವ ಸ್ಥಾನ ಕೊಡದೆ ಇರುವುದಕ್ಕೆ ನನಗೆ ಯಾವುದೇ ಅಸಮಾಧಾನವಿಲ್ಲ. 8 ಬಾರಿ ಶಾಸಕನಾಗಿದ್ದೇನೆ ಮುಂದೆ ಮಂತ್ರಿ ಕೊಟ್ಟರೆ ನಿಭಾಯಿಸುತ್ತೇನೆ. ಆದರೆ, ಸೋತವರಿ ಸಚಿವ ಸ್ಥಾನ ನೀಡೋದು ಸರಿಯಲ್ಲ ಎಂದರು.
ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಆಗಬೇಕಿತ್ತು. ಆದರೆ, ಏನು ಮಾಡದು ಆಗಿಲ್ಲ. ಇನ್ನು ಮೂರು ವರ್ಷ ಅವಧಿ ಇದ್ದು, ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಮಂತ್ರಿ ಆಗುತ್ತೇನೆ ಎನ್ನುವ ನಿರೀಕ್ಷೆ ಇದೆ. 8 ಬಾರಿ ಶಾಸಕನಾಗಿದ್ದೇನೆ ಮುಖ್ಯಮಂತ್ರಿ ಆಗುವ ದಿನಗಳು ದೂರಿಲ್ಲ. ಇನ್ನೂ ನನಗೆ ವಯಸ್ಸಿದೆ 10 ವರ್ಷ ರಾಜಕಾರಣ ಮಾಡುತ್ತೇನೆ ಎಂದರು.
ಯಾರ ಮೇಲೆ ಕೋಪ ಮಾಡಿಕೊಂಡರು ಏನು ಆಗುವದಿಲ್ಲ. ಹೀಗಾಗಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹೈ ಕಮಾಂಡ್ ಮೇಲೆ ನನ್ನ ಕೋಪವಿಲ್ಲ. ಅಥಣಿ ಕ್ಷೇತ್ರದಿಂದ ಗೆದ್ದ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದು ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯ ಸ್ಥಾನ ಸಿಗುತ್ತದೆ. ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಯಡಿಯೂರಪ್ಪ ಒಳ್ಳೆಯ ಸರ್ಕಾರ ಕೊಡುತ್ತಿದ್ದಾರೆ ಎಂದ ಅವರು,ನನ್ನ ಹೆಂಡತಿ ಜೊತೆಗೆ ನಾನು ಮುನಿಸಿಕೊಳ್ಳುವುದಿಲ್ಲ. ಹೀಗಿರುವಾಗ ಯಡಿಯೂರಪ್ಪ ಜೊತೆ ಮುನಿಸಿಕೊಳ್ಳುವ ಪ್ರಶ್ನೆ ಇಲ್ಲ. ನನಗೆ ಸಿಎಂ ಸ್ಥಾನದ ಯೋಗ್ಯತೆ ಇದೆ. ದೇವರು ಆಶೀರ್ವಾದ ಮಾಡಿದರೆ ಸಿಎಂ ಆಗುತ್ತೇನೆ ಎಂದರು.



