ಡಿವಿಜಿ ಸುದ್ದಿ, ಬೆಂಗಳೂರು; ಶಿರಾ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು,ಮಾಜಿ ಸಚಿವ ಟಿ.ಬಿ ಜಯಚಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ತುಮಕೂರು ಜಿಲ್ಲೆಯ ನಾಯಕರ ಜೊತೆ ಸಭೆ ನಡೆಸಿದ್ದೇವೆ. ಶಿರಾ ಉಪ ಚುನಾವಣೆಯನ್ನು ಪರಮೇಶ್ವರ್ ಅವರ ನೇತೃತ್ವತ್ವದಲ್ಲಿ ನಡೆಸುತ್ತೇವೆ. ಕೆ.ಎನ್. ರಾಜಣ್ಣ ಆಗಿ ಸಾಥ್ ನೀಡಲಿದ್ದಾರೆ. ಪಕ್ಷದ ಅಭ್ಯರ್ಥಿಯಾಗಿ ಜಯಚಂದ್ರ ಆಯ್ಕೆ ಮಾಡಲಾಗಿದೆ ಎಂದರು.
ರಾಜಣ್ಣನವರೇ ಜಯಚಂದ್ರ ಹೆಸರು ಸೂಚಿಸಿದ್ದಾರೆ. ಅವರ ಅಭಿಪ್ರಾಯವನ್ನು ನಾವು ಪಡೆದಿದ್ದೇವೆ. ನಮ್ಮ ವರಿಷ್ಠರಿಗೆ ಇದನ್ನೇ ಕಳಿಸಿಕೊಡುತ್ತೇವೆ. ಇಂದಿನಿಂದಲೇ ಚುನಾವಣೆ ಕಾರ್ಯ ಪ್ರಾರಂಭ ಮಾಡುತ್ತೇವೆ ಎಂದರು. ಈ ಸಭೆಯಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಕೆ.ಎನ್ ರಾಜಣ್ಣ, ಷಡಾಕ್ಷರಿ, ಚಂದ್ರಪ್ಪ ಅವರು ಭಾಗವಹಿಸಿದ್ದರು.



