ಡಿವಿಜಿ ಸುದ್ದಿ, ಮೈಸೂರು : ಜಮೀರು ಖಾನ್ ಬೀದಿಯಲ್ಲಿ ನಿಂತಿದ್ದ , ಎಲ್ಲೋ ಬಸ್ ಓಡೊಸಿಕೊಂಡಿದ್ದ ಫುಟ್ ಪಾತ್ ಕಿರಾಕಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿ ಕಿರಿಕಾರಿದರು.
ಮೈಸೂರಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಎಲ್ಲೋ ಬಸ್ ಓಡಿಸಿಕೊಂಡು ಇದ್ದನನ್ನು ದೇವೇಗೌಡರು ರಾಜಕಾರಣಕ್ಕೆ ಕರೆ ತಂದರು. ರಾಜಕೀಯವಾಗಿ ಕರೆ ತಂದ ಫ್ಯಾಮಿಗೆ ಬೆನ್ನಿಗೆ ಚೂರಿ ಹಾಕಿ ಹೋದ ಶಾಸಕ ಜಮೀರ್ ಖಾನ್ ಫುಟ್ ಪಾತ್ ಗಿರಾಕಿ ಎಂದರು.
ಪೌರತ್ವ ಕಾಯ್ದೆ ವಿರೋಧಿಸುವ ಕಾಂಗ್ರೆಸ್, ಜೆಡಿಎಸ್ ಮುಖಂಡರಿಗೆ ತಾಕತ್ ಇದ್ದರೆ ಚರ್ಚೆಗೆ ಬರಲಿ. ಅದನ್ನು ಬಿಟ್ಟು ಜನರನ್ನು ಎತ್ತಿಕಟ್ಟುವ ಕೆಲಸ ಮಾಡಬೇಡಿ ಎಂದು ಹೇಳಿದರು.



