ಡಿವಿಜಿ ಸುದ್ದಿ, ತುಮಕೂರು: ಕೆಲವರು ಗಾಂಧಿ ಹೆಸರು ಇಟ್ಟುಕೊಂಡು ತಾವೇ ಮಹಾತ್ಮ ಗಾಂಧಿ ಅಂದುಕೊಂಡಿದ್ದಾರೆ. ಗಾಂಧಿಯ ಹೆಸರಿಟ್ಟುಕೊಳ್ಳದು, ವೇಷ-ಭೂಷಣ ಧರಿಸುವುದು ಸುಲಭ. ಆದರೆ, ಮಹಾತ್ಮ ಗಾಂಧೀಜಿ ಆಗಲು ಸಾಧ್ಯವಿಲ್ಲ. ಗೋಡ್ಸೆ ಗಾಂಧೀಜಿ ದೇಹ ಮಾತ್ರ ಕೊಂದ್ರು, ಕಾಂಗ್ರೆಸ್ ಗಾಂಧೀಜಿಯ ಅವರ ತತ್ವಗಳನ್ನೇ ಕೊಲ್ಲುವ ಮೂಲಕ ಗೋಡ್ಸೆಗೂ ಮೀರಿದ ಅನ್ಯಾಯವನ್ನು ಕಾಂಗ್ರೆಸ್ ಎಸಗಿದೆ ಎಂದು ಸಚಿವ ಸಿ.ಟಿ. ರವಿ ಆರೋಪಿಸಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಗಾಂಧೀಜಿ ಅವರು ತತ್ವರಹಿತ ರಾಜಕಾರಣ ಮಾಡಬಾರದು ಎಂದು ಬಯಸಿದ್ದರು. ಆದರೆ, ಕಾಂಗ್ರೆಸ್ ತತ್ವರಹಿತ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ಗೆ ದೇಶಕ್ಕಿಂತ ವೋಟ್ ಗಳು ಮುಖ್ಯವಾಗಿದೆ. ರಾಹುಲ್ ಗಾಂಧಿಯ ನಡವಳಿಕೆ, ಅವರ ಅಪ್ರಬುದ್ಧತೆ ತೋರಿಸುತ್ತಿದೆ. ಅವರು ಮುಂದಿನ ಪ್ರಧಾನಿ ಎಂಬುದು ತಿರುಕನ ಕನಸು ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪಗೆ ಆಟವಾಡಿಸಲು ಸಾಧ್ಯವಿಲ್ಲ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬ ಪ್ರಬುದ್ಧ ರಾಜಕಾರಣಿ. ಅವರನ್ನು ಯಾರೂ ಆಟವಾಡಿಸಲು ಸಾಧ್ಯವಿಲ್ಲ. ಬೇಕಾದರೇ ಅವರೇ ಬೇರೆಯವರನ್ನು ಆಟವಾಡಿಸಬಲ್ಲರು. ವೈದ್ಯರು ಆಪರೇಷನ್ ಮಾಡುವಾಗ ರೋಗಿ ಉಳಿಯಬೇಕು ಅನ್ನುವ ಉದ್ದೇಶ ಹೊಂದಿರುತ್ತಾರೆ. ಅದಕ್ಕಾಗಿ ಬಿಪಿ, ಶುಗರ್ ನಿಯಂತ್ರಣಕ್ಕೆ ಬಂದ ನಂತರ ಆಪರೇಷನ್ ಮಾಡುತ್ತಾರೆ. ಅದೇ ರೀತಿ ವರಿಷ್ಠರು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು



