ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ 4 ಪಕ್ಷೇತರ ಸದಸ್ಯರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ದಾವಣಗೆರೆಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು.
ಪಕ್ಷೇತರ ಅಭ್ಯರ್ಥಿಗಳಾದ ಉಮಾ ಪ್ರಕಾಶ್ (ವಾರ್ಡ್ 32), ಶಿವಪ್ರಕಾಶ್ ಆರ್.ಎಲ್ (ವಾರ್ಡ್ 19),ಸೌಮ್ಯ ಎಸ್.ನರೇಂದ್ರ ಕುಮಾರ್ (ವಾರ್ಡ್ 13),ಆರ್ ಜಯಮ್ಮ (ವಾರ್ಡ್ 30) ಬಿಜೆಪಿ ಸೇರಿದರು.
ಒಟ್ಟು 45 ವಾರ್ಡ್ ನಲ್ಲಿ ಬಿಜೆಪಿ 17, ಕಾಂಗ್ರೆಸ್ 22 5 ಪಕ್ಷೇತರ ಸದಸ್ಯರು ಹಾಗೂ 1 ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದರು. ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯಬೇಕಾದರೆ ಮ್ಯಾಜಿಕ್ ನಂಬರ್ 23 ಆಗಿದೆ. ಇದೀಗ ನಾಲ್ಕು ಪಕ್ಷೇತರರು ಬಿಜೆಪಿ ಸೇರಿರುವುದರಿಂದ ಬೆಜೆಪಿ ಬಲ 17+4 ಸೇರಿ ಒಟ್ಟು 21 ಸ್ಥಾನ ಗಳಿಸಿದಂತಾಗುತ್ತದೆ. ಕಾಂಗ್ರೆಸ್ ಕೂಡ 22 ಸ್ಥಾನ ಗೆದ್ದಿದ್ದೆ. ಹೀಗಾಗಿ ಯಾರು ಅಧಿಕಾರ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.