Connect with us

Dvgsuddi Kannada | online news portal | Kannada news online

ಮಿಣಿ ಮಿಣಿ ಪೌಡರ್ ಟ್ರೋಲ್ ಗೆ ಸರಣಿ ಟ್ವೀಟ್ ಮೂಲಕ ಕುಟುಕಿದ ಕುಮಾರಸ್ವಾಮಿ

ಪ್ರಮುಖ ಸುದ್ದಿ

ಮಿಣಿ ಮಿಣಿ ಪೌಡರ್ ಟ್ರೋಲ್ ಗೆ ಸರಣಿ ಟ್ವೀಟ್ ಮೂಲಕ ಕುಟುಕಿದ ಕುಮಾರಸ್ವಾಮಿ

ಡಿವಿಜಿ ಸುದ್ದಿ, ಬೆಂಗಳೂರು: ಮಂಗಳೂರು ಬಾಂಬ್ ಪತ್ತೆ ಪ್ರಕಣದಲ್ಲಿ ಮಿಣಿ ಮಿಣಿ ಪೌಡರ್ ಎಂದಿದ್ದಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಟ್ರೋಲ್ ಗೆ ಗುರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಟ್ರೋಲಿಗರ ವಿರುದ್ಧ ಸರಣಿ ಟ್ವೀಟ್ ಮೂಲಕ ತರಾಟೆಗೆ ತಗೆದುಕೊಂಡಿದ್ದಾರೆ.

ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಕುಮಾರ ಸ್ವಾಮಿ ಮಿಣಿ ಮಿಣಿ ಪದದ ಅರ್ಥ ಹೇಳಿದ್ದಾರೆ. ಮಿಣಿ ಮಿಣಿ ಇದು ಶುದ್ಧ ಕನ್ನಡ ಪದವಾಗಿದ್ದು, ಗ್ರಾಮೀಣ ಭಾಗದ ಜನರು ಈ ಪದವನ್ನು ಬಳಕೆ ಮಾಡುತ್ತಾರೆ. ಬಿಜೆಪಿಯವರ ಜಿನ್ಸ್‌ ಪಾಕಿಸ್ತಾನ ಆಗಿರುವುದರಿಂದ ಅವರಿಗೆ ಕನ್ನಡ ಪದಗಳ ಬಗ್ಗೆ ತಾತ್ಸಾರವಿದ್ದು ಅವರು ಗ್ರಾಮೀಣ ಕರ್ನಾಟಕವನ್ನು ಅಪಮಾನಿಸಿದ್ದಾರೆ ಎಂದು ಟ್ವೀಟ್ ನಲ್ಲಿಯೇ ಕುಟುಕಿದ್ದಾರೆ.

ಮುಂದುವರಿದು ನಾನು ಯಾವುದೇ ಸುಳ್ಳು ಹೇಳಿಲ್ಲ, ನಿಂದನಾತ್ಮಕ ಪದವನ್ನು ಬಳಕೆ ಮಾಡಿಲ್ಲ, ಪತ್ರಿಕೆಯಲ್ಲಿ ಬಂದಿದ್ದ ವರದಿಯನ್ನೇ ಓದಿ ಹೇಳಿದ್ದೇನೆ, ಕನ್ನಡ ಭಾಷೆಯ ಬಗ್ಗೆ ಅರಿವಿರದ ಬಿಜೆಪಿಯವರು ಸತ್ಯದ ಮಾತನ್ನು ಗೇಲಿ ಮಾಡಿ, ಉಗ್ರ ಆದಿತ್ಯ ರಾವ್‌ ಬೆನ್ನಿಗೆ ನಿಂತಿದ್ದಾರೆ. ಇವರು ಧರ್ಮ ವಿರೋಧಿಗಳು.

ನಾನು ಈ ಹಿಂದೆ ಹೇಳಿದಂತೆ ಪಾಕಿಸ್ತಾನ ಹಾಗೂ ನಾಜಿ ಜೀನ್ ಹೊಂದಿರುವ ಬಿಜೆಪಿಯವರಿಗೆ ಕನ್ನಡದ ಮೂಲ ನಿವಾಸಿ ಸಮುದಾಯದ ನಾಯಕರನ್ನು ಕಂಡರೆ ಉರಿ. ಅದಕ್ಕೇ ಈ ಮಣ್ಣಿನ ಮೂಲ ನಿವಾಸಿ ಪ್ರತಿನಿಧಿಯಾಗಿರುವ ನನ್ನನ್ನು ಎದುರಲ್ಲಿ‌ ನಿಂತು ಹೋರಾಡಲಾಗದೇ ಗೇಲಿ ಮೂಲಕ ಹಣಿಯುವ ಪ್ರಯತ್ನ ಮಾಡುತ್ತಿದ್ದಾರೆ.

ದೇಶದಲ್ಲಿ ಇಂದು ನಡೆಯುತ್ತಿರುವುದು ಕುಟಿಲ ರಾಜಕಾರಣ. ಅದರ ಭಾಗವೇ ಗೇಲಿ, ಕೊಂಕು, ಟ್ರೋಲ್‌ಗಳು ಎಂದಿದ್ದಾರೆ. ಒಬ್ಬ ನಾಯಕನ ವಿರುದ್ಧ ಎದುರು ನಿಂತು ಹೋರಾಡಲಾಗದ ಹೇಡಿಗಳು ಮಾತ್ರ ಗೇಲಿ, ಅಪಹಾಸ್ಯಗಳಂತಹ ತಂತ್ರಗಳ ಮೂಲಕ ನನ್ನ ಹನನಕ್ಕೆ ನಿಂತಿದ್ದಾರೆ. ಮಿಣಿ ಮಿಣಿ ಎಂಬ ಶಬ್ಧ ಇಟ್ಟುಕೊಂಡು ಬಿಜೆಪಿ‌ ಮಾಡುತ್ತಿರುವುದು ಹೇಡಿಗಳ ಕೆಲಸ

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top