ಡಿವಿಜಿ ಸುದ್ದಿ, ರಾಮನಗರ: ಡ್ರಗ್ಸ್ ಜಾಲದಲ್ಲಿ ಕನ್ನಡ ಚಿತ್ರರಂಗಕ್ಕೆ ಮಸಿ ಬಳಿಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹಮದ್ ಅವರನ್ನ ಬಂಧಿಸಬೇಕು ಅಂತ ಹೇಳಿರುವವರನ್ನ ಮೊದಲು ಬಂಧಿಸಬೇಕು. ರಾಜಕಾರಣಕ್ಕಾಗಿ ಆರೋಪ ಮಾಡುವುದು ಸರಿಯಲ್ಲ ಎಂದರು.
ಜಮೀರ್ ಅಹಮದ್ ವಿರುದ್ಧ ಮಾತನಾಡಿದರೆ, ನಾನು ದೊಡ್ಡ ಲೀಡರ್ ಆಗುತ್ತೇನೆ. ನಾನು ಮುಸ್ಲಿಂ ವಿರೋಧಿ ಅಂತ ತೋರಿಸಿಕೊಳ್ಳುವುದನ್ನ ಬಿಡಬೇಕು. ಇದನ್ನ ಮೊದಲು ಬಿಡಬೇಕು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟರು.
ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಅವರ ಪಕ್ಷದಲ್ಲಿ ನಡೆಯುತ್ತಿರುವ ಬೇರೆ ಬೇರೆ ದಂಧೆಯನ್ನು ಮೊದಲು ಪತ್ತೆ ಹಚ್ಚಲಿ. ಕಿಸ್ ಕೊಟ್ಟಿರುವುದು, ಬ್ಲೂ ಪ್ಲಿಂ ನೋಡಿದರು ಬಿಜೆಪಿಯದ್ದಾರೆ. ಈ ಡ್ರಗ್ಸ್ ದಂಧೆ ವ್ಯವಹಾರದ ಬಗ್ಗೆ ಪೊಲೀಸ್ ಇಲಾಖೆಗೂ ಸಂಪೂರ್ಣ ಮಾಹಿತಿ ಗೊತ್ತು. ಕೇವಲ ಇಬ್ಬರು ನಟಿಯರನ್ನ ಮುಂದೆ ಇಟ್ಟುಕೊಂಡು ಕನ್ನಡ ಚಿತ್ರರಂಗಕ್ಕೆ ಮಸಿ ಬಳಿಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ ಎಂದು ಆರೋಪ ಮಾಡಿದರು.
ಈ ವಿಚಾರದ ಮೂಲಕ ಕೊರೊನಾ ಹಗರಣ ಮುಚ್ಚಿ ಹಾಕಲು ಬಿಜೆಪಿ ಯತ್ನ ಮಾಡುತ್ತಿದೆ ಎಂದ ಅವರು, ಡ್ರಗ್ಸ್ ವಿಚಾರವನ್ನ ಬಿಜೆಪಿ ದೊಡ್ಡದು ಮಾಡುತ್ತಿದೆ. ಸರ್ಕಾರ ಮೊದಲು ಡ್ರಗ್ಸ್ ದಂಧೆಯ ತನಿಖೆ ಮಾಡಲಿ. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡಿ ಎಂದು ಒತ್ತಾಯಿಸಿದರು.



