ಡಿವಿಜಿ ಸುದ್ದಿ, ಬೆಳಗಾವಿ: ಬಿಜೆಪಿ ಸರಕಾರ ಪೂರ್ಣ ಅವಧಿ ಪೂರೈಸುವುದೋ, ಇಲ್ಲವೋ ಗೊತ್ತಿಲ್ಲ. ಸದ್ಯದ ಸ್ಥಿತಿಯಲ್ಲಿ ಮರು ಚುನಾವಣೆ ನಡೆಯಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ಹಗಲುಗನಸು ಕಾಣುತ್ತಿದ್ದಾರೆ ಎಂದು ಕುಮಾರ ಸ್ವಾಮಿ ವ್ಯಾಂಗ್ಯವಾಡಿದರು.
ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲು ಬೆಳಗಾವಿಗೆ ಬಂದಿದ್ದ ಅವರು ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಾನು ಯಾವುದೇ ಸರ್ಕಾರ ಬೀಳಿಸಲ್ಲ. ಸರ್ಕಾರ ಉಳಿಸಿದ್ದೇನೆ. ನನ್ನ ಮೇಲೆ ಜನರು ನಂಬಿಕೆ ಇದ್ದರೆ, ಮತ ನೀಡಿ. ಉಪ ಚುನಾವಣೆ ನಂತರ ಸರ್ಕಾರ ಬೀಳುತ್ತದೆ. ಮರು ಚುನಾವಣಯಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎನ್ನುವು ಸಿದ್ದರಾಮಯ್ಯ ಭ್ರಮೆ. ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿಮುಂದುವರಿಯಲಿ. ನನಗೆ ಚುನಾವಣೆ ಆತುರ ಇಲ್ಲ. ಜನರ ಸಂಕಷ್ಟ ದೂರ ಆಗಲಿ ಎಂಬುದಷ್ಟೇ ನನ್ನ ಆಶಯ ಎಂದು ಸ್ಪಷ್ಟಪಡಿಸಿದರು.
ಪ್ರವಾಹದಿಂದ ಜನರು ಕಷ್ಟದಲ್ಲಿದ್ದಾರೆ. 15 ಕ್ಷೇತ್ರಗಳ ಉಪ ಚುನಾವಣೆಗೆ ರಾಜ್ಯ ಸರಕಾರ ಚುನಾವಣಾ ಆಯೋಗಕ್ಕೆ 15 ಕೋಟಿ ರೂ. ಕೊಡಬೇಕಿದೆ. ಸಾರ್ವತ್ರಿಕ ಚುನಾವಣೆಯಾದರೆ 254 ಕ್ಷೇತ್ರಗಳಿಗೆ 250 ಕೋಟಿ ರೂ. ಹೆಚ್ಚು ಹಣ ಜನರ ತೆರಿಗೆ ಕೊಡಬೇಕಾಗುತ್ತದೆ. ಹಾಗಾಗಿ ಈಗ ಚುನಾವಣೆ ಮುಖ್ಯ ಅಲ್ಲ ಎಂದರು.



