ಡಿವಿಜಿ ಸುದ್ದಿ, ರಾಮನಗರ: ಬಿಸಿಯೂಟ ಕಾರ್ಯಕರ್ತೆಯರಿಗೆ ಪ್ರತಿಭಟನೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತಗೆದುಕೊಂಡರು. ಪ್ರತಿಭಟನೆ ನಡೆಸುಬೇಡಿ ಅಂತಾ ಅನ್ನೋದಕ್ಕೆ ಭೂಮಿ ಏನು ನಿಮ್ಮಪ್ಪನ ಆಸ್ತಿನಾ ಎಂದು ಕಿಡಿಕಾರಿದರು.
ರಾಮನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಸಿಯೂಟ ಕಾರ್ಯಕರ್ತರು ಪ್ರತಿಭನೆ ನಡೆಸಲು ಅವಕಾಶ ಕೇಳಿದ್ದಾರೆ. ಬೆಂಗಳೂರು ಪೊಲೀಸರು ನಿನ್ನೆ ರಾತ್ರಿ ಪ್ರತಿಭಟನೆಗೆ ಅವಕಾಶ ನೀಡದಂತೆ ಪತ್ರ ಬರೆದಿದ್ದಾರೆ. ರಸ್ತೆ ಸುರಕ್ಷತೆ ದೃಷ್ಟಿಯಿಂದ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಅಂತ ಕಾರಣ ನೀಡಿದ್ದಾರೆ . ನಿಮ್ಮ ಇಂತಹ ಹೊಸ ಕಾನೂನುಗಳು ನಡೆಯುವುದಿಲ್ಲ.
ಹಿಂದಿನ ಎಲ್ಲಾ ಸರ್ಕಾರ ಇದ್ದಾಗಲೂ ಪ್ರತಿಭಟನೆ ನಡೆಯುತ್ತಿದ್ದವು. ಅಧಿಕಾರದಲ್ಲಿವರು ಪ್ರತಿಭಟನಕಾರರ ಸಮಸ್ಯೆ ಆಲಿಸಬೇಕು. ಆದರೆ, ಪ್ರತಿಭಟನೆ ಹತ್ತಿಕ್ಕುವ ಕ್ರಮ ಸರಿಯಲ್ಲ ಇಂತಹ ಅಧಿಕಾರಿಗಳು ಹತೋಟಿಗೆ ತರದಿದ್ದರೆ, ಗೃಹ ಸಚಿವರೇ ಧೂಳಿಪಟ ಆಗ್ತೀರಿ ಅಂತ ಎಚ್ಚರಿಕೆ ನೀಡಿದರು.



