ಡಿವಿಜಿ ಸುದ್ದಿ, ಬೆಂಗಳೂರು: ಈ ಬಾರಿಯ ವಿಧಾನಸಭಾ ಅಧಿವೇಶನ ಆರಂಭಕ್ಕೆ ಮುನ್ನವೇ ಸಂಪುಟ ಪುನಾರಚನೆ ಆಗಲಿದ್ದು, ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ವಿಶ್ವನಾಥ್ , ನಾನು ಪರಿಷತ್ ಸದಸ್ಯ. ಹೀಗಾಗಿ ನಾನು ಕೂಡ ಸಚಿವ ಸ್ಥಾನದ ಆಂಕಾಕ್ಷಿ ಎಂದರು
ಡ್ರಗ್ಸ್ ಮಾಫಿಯಾ ಕೊರೊನಾದಂತೆ ಇಡೀ ಜಗತ್ತನ್ನು ಆವರಿಸಿಕೊಂಡಿದೆ. ಪಾಕಿಸ್ತಾನ ಪಂಜಾಬ್ ರಾಜ್ಯಕ್ಕೆ ಡ್ರಗ್ಸ್ ಪೂರೈಕೆ ಮಾಡಿ ಡ್ರಗ್ಸ್ ರಾಜ್ಯ ಮಾಡಿದೆ.
ಈಗ ಸೆಲೆಬ್ರಿಟಿಗಳು ಇದನ್ನು ಬಳಕೆ ಮಾಡುವ ಮಟ್ಟಕ್ಕೆ ಬಂದಿದ್ದಾರೆ. ಯಾರೋ ಒಬ್ಬರನ್ನು ಬಂಧನ ಮಾಡುವುದರಿಂದ ಏನು ಆಗಲ್ಲ. ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಿದರೆ ಇದಕ್ಕೆ ಬ್ರೇಕ್ ಹಾಕಬಹುದು ಎಂದರು.



