ಡಿವಿಜಿ ಸುದ್ದಿ, ಕಲಬುರಗಿ: ನನ್ನ ಮುಖನೂ ಮಿಣಿ ಮಿಣಿ ಅಂತಿದೆ. ಮಿಣಿ ಅಂದ್ರೆ ತಪ್ಪಾಗಿ ಬಿಡುತ್ತಾ…. ಅದರಲ್ಲೇನಿದೆರೀ ಎಂದು ಟ್ರೋಲರ್ ಗಳಿಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತರಾಟೆಗೆ ತಗೆದುಕೊಂಡರು.

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮಿಣಿ ಮಿಣಿಯ ಬಗ್ಗೆ ನನಗೆ ಗೊತ್ತಿಲ್ಲ. ಕುಮಾರಸ್ವಾಮಿಯವರು ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಯಾದವರು. ನಮ್ಮ ಪಕ್ಕದ ಕ್ಷೇತ್ರದವರು. ಅವರ ಕೈ ಕೆಳಗೆ ಕೆಲಸ ಮಾಡಿದ್ದೇನೆ. ಕೆಲ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರ ಮಿಣಿಮಿಣಿ ಪೌಡರ್ ವಿಚಾರ ಬಗ್ಗೆ ಅಪಹಾಸ್ಯ ಮಾಡುವುದು ಸರಿಯಲ್ಲ ಎಂದರು.
ಅನುದಾನ, ಅಭಿವೃದ್ಧಿ ಬಗ್ಗೆ ಯುವಕರು ಮಾತನಾಡುತ್ತಿಲ್ಲ. ಆದರೆ, ಅನವಶ್ಯಕ ವಿಷಯವನ್ನು ಟ್ರೋಲ್ ಮಾಡುತ್ತಿದ್ದಾರೆ. ನನ್ನ ಮುಖನೂ ಮಿಣಿ ಮಿಣಿ ಅಂತಿದೆಪ್ಪಾ. ನಿಮ್ಮ ಮುಖನೂ ಮಿಣಿ ಮಿಣಿ ಅಂತಿದೆ. ಅದಕ್ಕೆ ಏನು ಮಾಡೋಕೆ ಆಗುತ್ತೆ. ಅದೊಂದು ವಿಷಯನಾ ಎಂದು ಪ್ರಶ್ನಿಸಿಸದರು.



