ಡಿವಿಜಿ ಸುದ್ದಿ, ಮೈಸೂರು: ಆರ್‌ಎಸ್‌ಎಸ್, ಬಜರಂಗದಳ, ಶ್ರೀರಾಮ ಸೇನೆಯಂತಹ ಸಂಘಟನೆಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿವೆ. ಹೀಗಾಗಿ ಸರ್ಕಾರ ಯಾವುದಾದ್ರೂ ಸಂಘಟನೆ ಬ್ಯಾನ್ ಮಾಡುವುದಾದರೆ, ಮೊದಲು ಬಲಪಂಥೀಯ ಸಂಘಟನೆಗಳನ್ನು ಬ್ಯಾನ್ ಮಾಡಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಸುತ್ತೂರಿನಲ್ಲಿ ಮಾತನಾಡಿದ ಅವರು, ಎಸ್‍ಡಿಪಿಐ ಹಾಗೂ ಪಿಎಫ್‍ಐ ಬ್ಯಾನ್ ಮಾಡಬೇಕು ಅಂತ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಬಿಜೆಪಿಯವರದ್ದು ದ್ವಂದ್ವ ನಿಲುವು . ಕೇವಲವಾ ಎಡಪಂಥೀಯ ಸಂಘಟನೆಗಳು ಮಾತ್ರ ಅಪರಾಧ ಕೃತ್ಯ ಮಾಡಿವೇಯಾ ..? ಬಲಪಂಥೀಯ ಸಂಘಟನೆಗಳು ಯಾವುದೇ ಕೃತ್ಯ ಮಾಡಿಲ್ಲವಾ?, ಬ್ಯಾನ್ ಮಾಡುವುದಾರೆ ನಿಷ್ಪಕ್ಷಪಾತವಾಗಿ ಕ್ರಮ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.
ಮಂಗಳೂರು ಬಾಂಬ್ ಪತ್ತೆ ಪ್ರಕರಣದಲ್ಲಿ ನಿಮಗೆ ಇಷ್ಟವಿಲ್ಲದ ಹೆಸರು ಕೇಳಿಬಂದಿದೆ. ಇದರಿಂದ ನೀವುಗಳು ಸೈಲೆಂಟಾಗಿದ್ದೀರಿ. ನೀವು ಟಾರ್ಗೆಟ್ ಮಾಡುವ ಅಲ್ಪಸಂಖ್ಯಾತ ಹೆಸರು ಬಂದಿದ್ದರೆ ಇಲ್ಲಿವರೆಗೆ ಸುಮ್ಮನಿರ್ತಿದ್ರಾ ಎಂದು ಪ್ರಶ್ನಿಸಿದರು.



