ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಚುನಾವಣೆ ಅಬ್ಬರ ಮುಗಿದಿದೆ. ಚುನಾವಣೋತ್ತರ ಎಲ್ಲಾ ಸಮೀಕ್ಷೆಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಜಯಗಳಿಸಲಿದೆ ಎಂದು ಅಭಿಪ್ರಾಯಪಟ್ಟಿವೆ. ಈ ಮೂಲಕ ಕೇಜ್ರಿವಾಲ್ ಹ್ಯಾಟ್ರಿಕ್ ಸಾಧನೆಯತ್ತ ಮುಖ ಮಾಡಿದ್ದು, ಈ ಬಾರಿ ಗೆಲ್ಲುವ ಜಿದ್ದಾಜಿದ್ದಿಗೆ ಬಿದ್ದಿದ ಬಿಜೆಪಿಗೆ ಮತ್ತೆ ಮುಖಭಂಗ ಆಗುವ ಸಾಧ್ಯತೆ ಹೆಚ್ಚಿದೆ.

ಕಳೆದ 22 ವರ್ಷದಿಂದ ರಾಜಧಾನಿಯಲ್ಲಿ ಕಮಲ ಅರಳಿಸಬೇಕೆಂದು ಬಿಜೆಪಿ ನಾಯಕರು ಶತ ಪ್ರಯತ್ನ ನಡೆಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಯುದ್ಧಕ್ಕೆ ಮುನ್ನ ಶಸ್ತ್ರ ತ್ಯಾಗ ಮಾಡಿದಂತಾಗಿದೆ. ಆದರೆ, ದೆಹಲಿ ಮತದಾರರು ಇಂದು ನೆಡೆದ 70 ಕ್ಷೇತ್ರಗಳ ಹಣೆ ಬರಹವನ್ನು ಬರೆದಿದ್ದಾರೆ.
2015ರಲ್ಲಿ ಮತದಾನಕ್ಕೆ ಕಂಡುಬಂದಿದ್ದ ಉತ್ಸಾಹ ಈ ಬಾರಿ ಕಂಡುಬರಲಿಲ್ಲ. ಕಳೆದ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಕಡಿಮೆ ಮತದಾನ ಆಗಿದೆ. 2015ರಲ್ಲಿ ಶೇ.65 ರಷ್ಟು ಮತದಾನವಾಗಿದ್ದರೆ. ಈ ಬಾರಿ ಸಂಜೆ ಶೇ.55ರಷ್ಟು ಮತದಾನ ನಡೆದಿದೆ. ಫಲಿತಾಂಶ ಫೆ.11 ರಂದು ಬರಲಿದ್ದು, ಫಲಿತಾಂಶಕ್ಕಾಗಿ ಮೂರು ಪಕ್ಷದ ಅಭ್ಯರ್ಥಿಗಳು ಎದುರು ನೋಡುತ್ತಿದ್ದಾರೆ. ಆದರೆ, ಇದೀಗ ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದಿದ್ದು, ಎಲ್ಲ ಎಕ್ಸೀಟ್ ಪೋಲ್ ಗಳು ಆಮ್ ಆದ್ಮಿ ಪಕ್ಷವೇ ಮತ್ತೆ ದೆಹಲಿ ಗದ್ದುಗೆ ಏರಲಿದೆ ಎಂದು ಹೇಳುತ್ತಿವೆ.
ಯಾವ ಸಮೀಕ್ಷೆ ಏನು ಹೇಳುತ್ತೆ
ಟೈಮ್ಸ್ ನೌ: ಆಪ್- 44 , ಬಿಜೆಪಿ- 26, ಕಾಂಗ್ರೆಸ್- 00, ಇತರೆ – 00
ಜನ್ ಕೀ ಬಾತ್: ಆಪ್- 48-61, ಬಿಜೆಪಿ – 09-21, ಕಾಂಗ್ರೆಸ್- 0-1, ಇತರೆ – 00-00
ನ್ಯೂಸ್ ಎಕ್ಸ್: ಆಪ್- 53-57, ಬಿಜೆಪಿ- 11-17, ಕಾಂಗ್ರೆಸ್ – 00-02, ಇತರೆ – 00-00
ಸಿಸಿರೋ: ಆಪ್ – 54, ಬಿಜೆಪಿ – 15, ಕಾಂಗ್ರೆಸ್ – 01, ಇತರೆ – 00
ನ್ಯೂಸ್ ನೇಷನ್: ಆಪ್- 55, ಬಿಜೆಪಿ- 14, ಕಾಂಗ್ರೆಸ್- 01, ಇತರೆ – 00



