ಡಿವಿಜಿ ಸುದ್ದಿ, ಹರಿಹರ: ಪಕ್ಷಕ್ಕೆ ದ್ರೋಹ ಬಗೆದರೆ ಹೆತ್ತ ತಾಯಿಗೆ ದ್ರೋಹ ಬಗೆದಂತೆ. ಪಕ್ಷಕ್ಕೆ ದ್ರೋಹ ಮಾಡಿದವರನ್ನ ಭಾರತೀಯ ಜನತಾ ಪಾರ್ಟಿ ದೂರ ಇಡಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.
ನಗರದ ಹೆಚ್ ಕೆ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ನಗರ ಮತ್ತು ಗ್ರಾಮಾಂತರ ಮಂಡಲದ ನೂತನ ಅಧ್ಯಕ್ಷರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದಲ್ಲಿನ ಆಂತರಿಕಾ ಕಚ್ಚಾಟದಿಂದಾಗಿ ದಾವಣಗೆರೆಯ ಪಾಲಿಕೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆಯುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಸಾವಿರಾರು ಕಾರ್ಯಕರ್ತರ ಪರಿಶ್ರಮ ಪಕ್ಷ ಬೆಳೆದಿದೆ. ಪಕ್ಷಕ್ಕೆ ದ್ರೋಹ ಬಗೆದರೆ ಹೆತ್ತ ತಾಯಿಗೆ ದ್ರೋಹ ಬಗೆದಂತೆ. ಪಕ್ಷದಲ್ಲಿ ಅಧ್ಯಕ್ಷ ಸ್ಥಾನ ಎನ್ನುವುದು ಒಂದು ಜವಾಬ್ದಾರಿ. ಅಧಿಕಾರವಿಲ್ಲದಿದ್ದರೆ ಅಧ್ಯಕ್ಷನೂ ಒಬ್ಬ ಸಮಾನ್ಯ ಕಾರ್ಯಕರ್ತ. ಎಲ್ಲರನ್ನೂ ಒಟ್ಟುಗೂಡಿಸಿ ಸಂಘಟನೆ ಮಾಡಬೇಕು ಎಂದು ನೂತನ ಅಧ್ಯಕ್ಷರಿಗೆ ಕರೆ ನೀಡಿದರು.
ಜಿಲ್ಲಾ ಚುನಾವಣಾ ಉಸ್ತುವಾರಿ ದತ್ತಾತ್ರೀ , ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಎಂ ವೀರೇಶ್ ಹನಗವಾಡಿ, ಜಿ.ಪಂ ಸದಸ್ಯ ಬಿ.ಎಮ್.ವಾಗೀಶ್ ಸ್ವಾಮಿ, ಇದೇ ವೇಳೆ ನಗರ ಘಟಕದ ಅಧ್ಯಕ್ಷರಾಗಿ ಅಜಿತ್ ಸಾವಂತ, ಗ್ರಾಮಾಂತರ ಘಟಕದ ಅಧ್ಯಕ್ಷರಾಗಿ ಎಂ .ಪಿ.ಲಿಂಗಾರಾಜ್ ಹಿಂಡಸಘಟ್ಟ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಜೀವನ ಮೂರ್ತಿ, ಮಂಡಲ ಉಸ್ತುವಾರಿ ಲಿಂಗರಾಜ್ ಗೌಳಿ, ನಗರ ಚುನಾವಣಾ ಸಹ ಪ್ರಭಾರಿ ಹೆಚ್.ಮಂಜನಾಯ್ಕ್, ತಾ.ಪಂ ಅಧ್ಯೆಕ್ಷೆ ಶ್ರೀದೇವಿ ಮಂಜಣ್ಣ, ರಾಜನಹಳ್ಳಿ ಶಿವಕುಮಾರ್, ರಾಜು ರೊಖಡೆ, ಗೋವಿನಹಾಳ್ ರಾಜಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



