ಡಿವಿಜಿ ಸುದ್ದಿ, ದಾವಣಗೆರೆ: ಕಾಂಗ್ರೆಸ್ ಮುಖಂಡ ವೈ. ರಾಮಪ್ಪ ದಾಖಲಿಸಿದ್ದ ಜಾತಿ ನಿಂದನೆ ಕೇಸ್ ನಲ್ಲಿ ಬಿಜೆಪಿ ಮುಖಂಡ ನಾಗರಾಜ್ ಲೋಕಿಕೆರೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.
ವಿದ್ಯಾನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಂತರ ನೇರವಾಗಿ ನ್ಯಾಯಾಲಯಕ್ಕೆ ಶರಣಾದರು. ಲೋಕಸಭಾ ಚುನಾವಣೆ ವೇಳೆ ದಾವಣಗೆರೆ ತಾಲ್ಲೂಕಿನ ನೇರ್ಲಿಗೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ವೈ.ರಾಮಪ್ಪ ವೀರಶೈವ ಸಮುದಾಯ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಮುಖಂಡರು ಜಾತಿ ನಿಂದನೆ ಮಾಡಿದ್ದಾರೆ ಎಂದು ವೈ. ರಾಮಪ್ಪ , ಬಿಜೆಪಿ ಮುಖಂಡ ನಾಗರಾಜ್ ಲೋಕಿಕೆರೆ ವಿರುದ್ಧ ಕೇಸು ದಾಖಲಿಸಿದ್ದರು. ಇದಲ್ಲದೆ ಇತ್ತಿಚೆಗೆ ನಡೆದ ಪಾಲಿಕೆ ಚುನಾವಣೆ ವೇಳೆಯೂ ಮತ್ತೊಮ್ಮೆ ಜಾತಿ ನಿಂದನೆ ಕೇಸ್ ದಾಖಲಿಸಾಗಿತ್ತು. ಈ ಪ್ರಕರಣದಲ್ಲಿ ಇದೀಗ ಬಿಜೆಪಿ ಮುಖಂಡ ನಾಗರಾಜ ಇವತ್ತು ನ್ಯಾಯಾಂಗ ಬಂಧಕ್ಕೆ ಒಳಗಾಗಿದ್ದಾರೆ.

ನ್ಯಾಯಾಂಗ ಬಂಧಕ್ಕೆ ಒಳಗಾಗುವುದಕ್ಕೂ ಮುನ್ನ ಮಾತನಾಡಿದ ನಾಗರಾಜ್ , ನನ್ನನ್ನು ರಾಜಕೀಯವಾಗಿ ತುಳಿಯುವ ಉದ್ದೇಶದಿಂದ ಜಾತಿ ನಿಂದನೆ ಕೇಸ್ ನಲ್ಲಿ ಸಿಲುಕಿಸಲಾಗಿದೆ. ನಾನು ಕಾನೂನಿಗೆ ಗೌರವ ಕೊಡುವ ಉದ್ದೇಶದಿಂದ ನ್ಯಾಯಾಲಕ್ಕೆ ಹೋಗುತ್ತಿದ್ದೇನೆ. ವೈರಲ್ ಆದ ವಿಡಿಯೋ ಆಧಾರದ ಮೇಲೆ ನಮ್ಮ ಸಮಾಜದ ಮುಖಂಡರು ಸೇರಿ ಪ್ರತಿಭಟನೆ ಮಾಡಿದ್ದೇವು. ಪ್ರತಿಭಟನೆ ನಂತರ ಹಿರಿಯರ ಸಲಯೆಯಂತೆ ಸುಮ್ಮನಾಗಿದ್ದೇವು. ಆದರೆ, ಈಗ ಜಾತಿ ನಿಂದನೆ ಕೇಸ್ ದಾಖಲಿಸಿ ನನ್ನನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಿದ್ದಾರೆ ಎಂದು ದೂರಿದರು. ರಾಜಕೀಯ ಲಾಭಕ್ಕಾಗಿ ಕೆರಳಿಸುವ ಹೇಳಿಕೆ ಕೊಟ್ಟು ಜಾತಿ ನಿಂದನೆ ಕೇಸ್ ದಾಖಲಿಸುವುದು ಕಾಂಗ್ರೆಸ್ ಮುಖಂಡ ರಾಮಪ್ಪ ಅವರ ನಿತ್ಯದ ಕಾಯಕ ಎಂದು ಹೇಳಿದರು.
ಮಹಾನಗರ ಪಾಲಿಕೆ ಚುನಾವಣೆ ಪ್ರಚಾರಕ್ಕೆ ಹೋದಾಗ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಪೊಲೀಸರ ಮಧ್ಯೆ ಪ್ರವೇಶ ಮಾಡಿ ನಮ್ಮ ಕಳುಹಿಸಿದ್ದರು. ಮರು ದಿನವೇ ನನ್ನ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ. ಸಮಾಜ ಮುಖಂಡನಾಗಿ ಕಾನೂನು ದುರುಪಯೋಗ ಮಾಡಿಕೊಳ್ಳುವುದು ನಿಜಕ್ಕೂ ಸರಿಯಲ್ಲ. ರಾಮಪ್ಪ ಅವರ ಮೇಲೆ ಯಾವುದೇ ದ್ವೇಷ ಇಲ್ಲ. ನಾನು ಎಲ್ಲಾ ಜಾತಿಯವರೊಂದಿಗೂ ಅನ್ಯೂನ್ಯತೆಯಿಂದ ಇದ್ದೇನೆ. ಆದರೆ, ರಾಜಕೀಯ ಲಾಭದ ಉದ್ದೇಶದಿಂದ ಕೇಸ್ ದಾಖಲಿಸಲಾಗಿದೆ. ಸಮಾಜದ ಎಲ್ಲಾ ಮುಖಂಡರ ಸಹಕಾರದಿಂದ ಆದಷ್ಟು ಬೇಗ ಹೊರ ಬರಲಿದ್ದೇನೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಗೋಣ್ಯಪ್ಪ , ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಮ್ಮ, ಶೋಷಿದ ವರ್ಗಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಾಡದ ಆನಂದರಾಜ್ , ಮುಖಂಡರಾದ ದಿಳ್ಯೆಪ್ಪ, ಮುಪ್ಪಣ್ಣ, ಎಚ್.ಕೆ. ಬಸವರಾಜ್, ದೇವಿರಮ್ಮ ಮಂಜನಾಯ್ಕ್,ಆವರಗೆರೆ ರುದ್ರೇಶ್, ಶ್ರೀನಿವಾಸ್ ಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



