ಡಿವಿಜಿ ಸುದ್ದಿ, ದಾವಣಗೆರೆ : ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದನ್ನು ವಿರೋಧಿಸಿ ಹೇಳಿಕೆ ನೀಡಿದ್ದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಪ್ರಾಣ ಬೆದರಿಕೆ ಪತ್ರ ಬಂದಿದೆ. ಈ ಹಿಂದೆ ಡಿ.23 ರಂದು ದೂರವಾಣಿ ಕರೆಮಾಡಿ ಪ್ರಾಣ ಬೆದರಿಕೆ ಹಾಕಿದ್ದ ವ್ಯಕ್ತಿಯೇ ಪತ್ರ ಬರೆದು ಜೀವ ಬೆದರಿಕೆ ಹಾಕಿದ್ದಾನೆ.
ಪತ್ರದಲ್ಲಿ ಏನಿದೆ
ಸಾವರ್ಕರ್ ಅವರು, ಬ್ರಿಟಿಷರ ಜೊತೆ ಕೈ ಜೋಡಿಸಿದ್ದರು ಅಂತ ಹೇಳಿಕೆ ನೀಡಿದ್ದೀರಿ. ಇದು ನಮಗೆ ನೋವುಂಟು ಮಾಡಿದೆ.ಇದಕ್ಕೂ ಮುನ್ನ ಫೋನ್ ಮಾಡಿ ಕ್ಷಮೆ ಕೇಳುವಂತೆ ಹೇಳಿದ್ದೆ. ಆದರೆ, ನೀವು ಕೊಲೆ ಬೆದರಿಕೆ ಎಂದು ಕೇಸು ದಾಖಲಿಸಿದ್ದೀರಿ.. ಏನು ತೊಂದರೆ ಇಲ್ಲ. ಅದೇ ಮಾತನನ್ನು ಮತ್ತೊಮ್ಮೆ ಹೇಳತ್ತೀನಿ ಕೇಳಿ, ಈಗ ನಾನು ಹೇಳುವ ಮಾತನ್ನು ತಮಾಷೆಯಾಗಿ ತಗೆದುಕೊಂಡರೆ, ಭಾರೀ ಬೆಲೆ ತೆರಬೇಕಾಗುತ್ತದೆ. ಅದಕ್ಕೆ ಹೇಳತ್ತಿನಿ ಜ. 30 ರೊಳಗೆ ಕಾಲವಕಾಶ ಕೊಡುತ್ತೇನೆ. ಅಷ್ಟರೊಳಗೆ ಪ್ರೆಸ್ ಮೀಟ್ ಮಾಡಿ ಕ್ಷಮೆ ಕೇಳಬೇಕು.

ಸಿದ್ದರಾಮಯ್ಯ, ಗುಂಡೂರಾವ್ ಗೂ ಬಿಡುವುದಿಲ್ಲ
ಕೇವಲ ನಿಮಗೆ ಮಾತ್ರ ಒತ್ತಡ ಹಾಕುತ್ತಿಲ್ಲ. ಮುಂದೆ ನಿಮ್ಮ ನಾಯಕರಾದ ಸಿದ್ಧರಾಮಯ್ಯ, ದಿನೇಶ್ ಗುಂಡೂರಾವ್ಅವರನ್ನು ಬಿಡುವುದಿಲ್ಲ. ಅವರು ಕ್ಷಮೆ ಕೇಳುವಂತೆ ಮಾಡ್ತೀನಿ. ಕ್ಷಮಾಪಣೆ ಕೇಳಿದರೆ, ನಾನು ನಿಮಗೆ ತುಂಬಾ ಹೃದಯದ ಧನ್ಯವಾದ ಹೇಳ್ತೀನಿ. ಇಲ್ಲವೆಂದರೆ ಮುಂದಿನ ಎಲ್ಲಾ ಘಟನೆಗಳಿಗೂ ನೀವೇ ಜವಾಬ್ದಾರರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.



