ಡಿವಿಜಿ ಸುದ್ದಿ, ಬೆಂಗಳೂರು: ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಅದರ ತನಿಖೆ ನಡೆಯಲಿದ್ದು, ಎಲ್ಲರ ಬಣ್ಣ ಬಯಲಾಗದಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ಇದನ್ನು ಓದಿ :ಇಂದಿರಾ ಗಾಂಧಿ ಕ್ಯಾಂಟೀನ್ ಹೆಸರು ಬದಲಾವಣೆಗೆ ಸರ್ಕಾರ ಚಿಂತನೆ: ಆರ್ ಅಶೋಕ್
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ರಾಜ್ಯ ಸರ್ಕಾರದ ಯೋಜನೆ. ಒಂದೊಂದು ಕ್ಯಾಂಟೀನ್ ಕಟ್ಟಡಕ್ಕೆ 1 ಕೋಟಿ ವೆಚ್ಚ ಮಾಡಲಾಗಿದೆ ಭಾರೀ ಅವ್ಯವಹಾರ ನಡೆದಿದೆ. ಇಂದಿರಾ ಕ್ಯಾಂಟೀನಿಗೆ ಕಾಂಗ್ರೆಸ್ ದುಡ್ಡು ಕೊಡುವುದಾದರೆ ಅದಕ್ಕೆ ನೆಹರೂ ಹೆಸರು ಇಡಲಿ, ರಾಜೀವ್ ಹೆಸರು ಇಡಲಿ ಅಥವಾ ಮಾಂಸಾಹಾರ ಆರಂಭಿಸಿ ಸೋನಿಯಾ ಹೆಸರನ್ನೂ ಇಡಲಿ ಎಂದರು.
ಅನ್ನಪೂರ್ಣೇಶ್ವರಿ ಹೆಸರಿಡಲಿ
ಕಾಂಗ್ರೆಸ್ ಪಕ್ಷದ ತನ್ನ ಹಣದಿಂದ ಈ ಕ್ಯಾಂಟೀನ್ ತೆರೆದಿದ್ದರೆ, ಒಂದಿಷ್ಟು ಪಾಪನಾದ್ರೂ ಕಡಿಮೆಯಾಗುತ್ತಿತ್ತು. ಆದರೆ, ಸರ್ಕಾರದ ದುಡ್ಡಿನಲ್ಲಿ ಇನ್ನು ಮುಂದೆ ಹಣ ನುಂಗುವ ಯೋಜನೆಯನ್ನು ಅದೇ ಹೆಸರಲ್ಲಿ ಮುಂದುದುವರಿಸುವುದು ಸರಿಯಲ್ಲ. ಈ ಯೋಜನೆಗೆ ಅನ್ನಪೂರ್ಣೇಶ್ವರಿಯ ಹೆಸರು ಇಡಬಹುದು.ವಾಲ್ಮೀಕಿ ಅನ್ನ ಕುಟೀರ ಎಂಬ ಹೆಸರು ಇಡುವ ನಿರ್ಧಾರಕ್ಕೆ ಬಂದಿಲ್ಲ. ಇಂತಹ ಸಲಹೆಯೊಂದು ಕಂದಾಯ ಸಚಿವರಿಗೆ ಬಂದಿರಬಹುದು ಎಂದರು.