ಡಿವಿಜಿ ಸುದ್ದಿ, ಬೆಂಗಳೂರು: ಸಂಪುಟ ವಿಸ್ತರಣೆ ದಿನದಿಂದ ದಿನಕ್ಕೆ ಕಗ್ಗಂಟಾಗಿ ಪರಿಣಮಿಸುತ್ತಿದೆ. ಶಾಸಕ ಮಹೇಶ್ ಕುಮಟಳ್ಳಿ ನಾನು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ. ಆದರೆ, ಸೋತಿರುವ ಎಚ್ . ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನ ಕೊಡಿ ಎಂದು ಶಾಸಕ ಮಹೇಶ್ ಕಮಟಳ್ಳಿ ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ಚುನಾವಣೆ ಸಂದರ್ಭದಲ್ಲಿ 35 ಸಾವಿರ ಜನರ ಮುಂದೆ ನಾನು ಸೇರಿದಂತೆ 17 ಶಾಸಕರನ್ನು ಮಂತ್ರಿ ಮಾಡ್ತೀನಿ ಅಂತ ಹೇಳಿದ್ದರು. ಯಡಿಯೂರಪ್ಪ ಮಾತು ತಪ್ಪಲ್ಲ ಅನ್ನೋ ವಿಶ್ವಾಸವಿದೆ. ಆದರೆ, ಇತ್ತೀಚಿನ ಬೆಳವಣಿಗೆಯಿಂದ ಗೊಂದಲಕ್ಕೆ ಒಳಗಾಗಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಸಚಿವ ಸ್ಥಾನ ಕೊಡ್ತೀನಿ ಅಂದಿದ್ದರು. ಆದರೆ, ಇತ್ತೀಚಿನ ಬೆಳವಣಿಗೆ ನೋಡಿದರೆ, ನನ್ನ ಹೆಸರು ಕೈ ಬಿಡುತ್ತಾರೆ ಅಂತ ಚರ್ಚೆ ಆಗ್ತಿದೆ. ಈ ಸುದ್ದಿ ಮನಸ್ಸಿಗೆ ಬಹಳ ನೋವು ಉಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಯಡಿಯೂರಪ್ಪ ಕೊಟ್ಟ ಮಾತು ಮೀರುವುದಿಲ್ಲ ಅನ್ನೋ ವಿಶ್ವಾಸವಿದೆ. ಈ ಬಗ್ಗೆ ಇನ್ನು ಸಿಎಂ ಬಳಿ ನಾವು ಮಾತಾಡಿಲ್ಲ. ಬಿಜೆಪಿ ಸರ್ಕಾರ ಬರಲು ನೂರಾರು ಸಮಸ್ಯೆ ಎದುರಿಸಿದ್ದೇವೆ. ಹುಲಿ ಬಾಯಿಗೆ ತಲೆ ಕೊಟ್ಟು ಗೆದ್ದು ಬಂದಿದ್ದೇವೆ. ನಮ್ಮ ತ್ಯಾಗದಿಂದ ಈ ಸರ್ಕಾರ ಬಂದಿದ್ದೇವೆ. ಆದರೆ, ನನಗೆ ಮಂತ್ರಿ ಆಗಬೇಕು ಅನ್ನೋ ಆಸೆ ಇಲ್ಲ. ಆದರೆ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಮಾತು ಉಳಿಸಿಕೊಳ್ಳದಿದ್ದರೆ, ಜನರ ದೃಷ್ಟಿಯಲ್ಲಿ ಯಡಿಯೂರಪ್ಪಗೆ ಬಗ್ಗೆ ಕೆಟ್ಟ ಸಂದೇಶ ಹೋಗುತ್ತದೆ.
ಪಕ್ಷಕ್ಕಾಗಿ ತ್ಯಾಗ ಮಾಡಬೇಕು ಅಂದ್ರೆ ಮಾಡಲು ಸಿದ್ಧ. ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುವುದಕ್ಕೂ ಸೈ, ಪಕ್ಷ ಸಂಘಟನೆ ಮಾಡುವುದಕ್ಕೂ ಸಿದ್ಧವಿದ್ದೇನೆ. ಆದರೆ, ಸೋತಿರುವ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಬೇಕು.ಚುನಾವಣೆಯಲ್ಲಿ ಸೋತಿರುವ ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ ನೀಡಿದ್ದೀರಿ. ವಿಶ್ವನಾಥ್ ರನ್ನ ಯಾಕೆ ಮಾಡಬಾರದು ಎಂದು ಪ್ರಶ್ನಿಸಿದರು.
.



