ಡಿವಿಜಿ ಸುದ್ದಿ, ಹಾಸನ: ಸಚಿವ ಸಂಪುಟ ವಿಸ್ತರಣೆಗೆ ಕಾದು ಕಾದು ಹೈರಾಣ ಆಗಿದ್ದವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಿಹಿ ಸುದ್ದಿ ನೀಡಿದ್ದಾರೆ. ಕೊನೆಗೂ ಸಂಪುಟ ವಿಸ್ತಣೆಗೆ ಕಾಲ ಕೂಡಿ ಬಂದಿದ್ದು, ಈ ತಿಂಗಳ ಅಂತ್ಯಕ್ಕೆ ಸಂಪುಟ ವಿಸ್ತರಣೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಹೊಳೆನರಸೀಪುರ ತಾಲ್ಲೂಕಿನ ಸಿಂಗನಕುಪ್ಪೆ ಗ್ರಾಮದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ತಿಂಗಳ ಕೊನೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.
ಹಿಂದಿನ ಮೈತ್ರಿ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 17 ಜನ ಶಾಸಕರಿಗೆ ಸಚಿವ ಸ್ಥಾನ ನೀಡುವುದು ಒಂದು ಕಡೆಯಾದರೆ, ಬಿಜೆಪಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯೂ ಕೂಡ ದೊಡ್ಡದಿದೆ. ಈ ಎರಡನ್ನೂ ಮುಖ್ಯಮಂತ್ರಿ ಯಡಿಯೂರಪ್ಪ ಯಾವ ರೀತಿ ಬ್ಯಾಲೆನ್ಸ್ ಮಾಡ್ತಾರೆ ಎನ್ನುದು ಕುತೂಹಲ ಮೂಡಿಸಿದೆ.
ಈಗಾಗಲೇ ಹಿರಿಯ ಸಚಿವರಾದ ಈಶ್ವರಪ್ಪ, ಜಗದೀಶ್ ಶೆಟ್ಟರು, ಡಿಸಿಎಂ ಗೋವಿಂದ್ ಕಾರಜೋಳ ,ಲಕ್ಷ್ಮಣ್ ಸವದಿ ಸೇರಿದಂತೆ ಅನೇಕರು ಪಕ್ಷದ ನಿರ್ಧರಕ್ಕೆ ಬದ್ಧರಾಗಿದ್ದೇವೆ. ಪಕ್ಷ ಯಾವುದೇ ನಿರ್ಧಾರ ತಗೆದುಕೊಂಡರೂ, ಅದಕ್ಕೆ ನಾವು ಬದ್ಧರಾಗಿರುವುದಾಗಿ ಹೇಳಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಆಗುತ್ತೋ ಅಥವಾ ಪುನರ್ ರಚನೆ ಆಗುತ್ತೋ ಎನ್ನುವ ಪ್ರಶ್ನೆ ಮೂಡಿದೆ.
ಇನ್ನೊಂದೆಡೆ ಡಿಸಿಎಂ ಸ್ಥಾನಕ್ಕಾಗಿ ರಮೇಶ್ ಜಾರಾಕಿಹೊಳಿ ಮತ್ತು ಶ್ರೀರಾಮುಲು ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಇಬ್ಬರಲ್ಲಿ ಒಬ್ಬರಿಗೆ ಡಿಸಿಎಂ ಸ್ಥಾನ ನೀಡಲಾಗುತ್ತಾ ಅಥವಾ ಈಗಿರುವ ಡಿಸಿಎಂ ಸ್ಥಾನಕ್ಕೆ ಮಾತ್ರ ಸಿಮೀತಗೊಳಿಸಿ ರಮೇಶ್ ಜಾರಾಕಿಹೊಳಿ ಅವರಿಗೆ ಕೇವಲ ಮಂತ್ರಿಸ್ಥಾನ ನೀಡಲಾಗುತ್ತಾ ..? ಇನ್ನು ಉಪ ಚುನಾವಣೆಯಲ್ಲಿ ಗೆಲ್ಲದ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ಸಿಗುತ್ತಾ..? ಇಲ್ಲವೋ ಅನ್ನೋ ಪ್ರಶ್ನೆ ಕೂಡ ಇದೆ. ಈ ಎಲ್ಲಾ ಪ್ರಶ್ನೆಳಿಗೆ ಉತ್ತರ ಸಿಗಬೇಕಾದರೆ, ಈ ತಿಂಗಳ ಕೊನೆಯ ವರೆಗೆ ಕಾಯಬೇಕಿದೆ.