Connect with us

Dvgsuddi Kannada | online news portal | Kannada news online

ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ: ಸೋನಿಯಾ,ಪ್ರಿಯಾಂಕಾ, ಒವೈಸಿ ವಿರುದ್ಧ ಪ್ರಕರಣ ದಾಖಲು

ಅಂತರಾಷ್ಟ್ರೀಯ ಸುದ್ದಿ

ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ: ಸೋನಿಯಾ,ಪ್ರಿಯಾಂಕಾ, ಒವೈಸಿ ವಿರುದ್ಧ ಪ್ರಕರಣ ದಾಖಲು

ಅಲಿಗಢ : ಕೇಂದ್ರ ಸರ್ಕಾರ ಜರಿಗೆ ತರಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆಂಬ  ಆರೋಪದಡಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್‌ ಒವೈಸಿ  ವಿರುದ್ಧ ದೂರು ದಾಖಲಾಗಿದೆ.

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಮುಖ್ಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.ಪ್ರದೀಪ್‌ ಗುಪ್ತ ಎಂಬ ವಕೀಲರೊಬ್ಬರು ಈ ಪ್ರಕರಣ ದಾಖಲಿಸಿದದ್ದಾರೆ. ಈ ಅರ್ಜಿಯನ್ನು  ನ್ಯಾಯಾಲಯವು  ಮಾನ್ಯ ಮಾಡಿದ್ದು, ಜನವರಿ 24ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಅಸಾದುದ್ದೀನ್‌ ಒವೈಸಿ ಅವರು ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರಂತರವಾಗಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಅಂತರಾಷ್ಟ್ರೀಯ ಸುದ್ದಿ

To Top