ಡಿವಿಜಿ ಸುದ್ದಿ, ದಾವಣಗೆರೆ: ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಎಲ್ಲಾ ವಾರ್ಡ್ ಗಳಲ್ಲಿ ಸ್ಪರ್ಧಿಸಲಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಮೋಹನ್ ದಾಸರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ನಗರದ ಜನತೆಗೆ ಮೂಲಸೌಕರ್ಯ ಒದಗಿಸುವಲ್ಲಿ ಆಡಳಿತ ಪಕ್ಷಗಳು ವಿಫಲವಾಗಿದ್ದು, ನಗರದಲ್ಲಿ ಜಲ್ವಂತ ಸಮಸ್ಯೆಯಿಂದ ನಲುಗುತ್ತಿದೆ. ಈ ಎಲ್ಲಾ ಸಮಸ್ಯೆಯಿಂದ ದೂರವಾಗಿಸಿ ಸುಂದರ, ಅತ್ಯುತ್ತಮ ಮೂಲಸೌಕರ್ಯಗಳ್ಳುಳ್ಳ ನಗರವನ್ನಾಗಿ ನಿರ್ಮಿಸಬೇಕಿದೆ. ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಹಾಗೂ ಪ್ರಾಮಾಣಿಕ ನಗರ ಪಾಲಿಕೆ ಸದಸ್ಯರ ಅವಶ್ಯಕತೆ ಬೇಕಾಗಿದ್ದು, ಜನ ಸಾಮಾನ್ಯರ ಪಕ್ಷವನ್ನು ಬೆಂಬಲಿಸಿ ಎಂದರು.
ಆಮ್ ಆದ್ಮಿ ಪಕ್ಷ ತನ್ನ ಎಲ್ಲಾ ವಾರ್ಡ್ ಗಳಲ್ಲಿ ಅಭ್ಯರ್ಥಿ ನಿಲ್ಲಿಸಲಿದೆ, ಈಗಾಗಲೇ ನವದೆಹಲಿಯಲ್ಲಿ ಶೈಕ್ಷಣಿಕ, ಆರೋಗ್ಯ, ವಿದ್ಯುಚ್ಚಕ್ತಿ, ನೀರು ಇನ್ನು ಮುಂತಾದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆಯನ್ನು ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಅವರು ಮಾಡಿತೋರಿಸಿದ್ದಾರೆ. ದೆಹಲಿ ಮಾದರಿ ಆಡಳಿತವನ್ನು ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ.ಎಲ್.ರಾಘವೇಂದ್ರ, ಸಂಜಿತ್ ಸೆಹವಾನಿ, ಜಗದೀಶ್ ವಿ ಸದಂ ಸೇರಿದಂತೆ ಮತ್ತಿತರರಿದ್ದರು.