ಡಿವಿಜಿ ಸುದ್ದಿ, ಬೆಂಗಳೂರು: ಇತ್ತೀಚೆಗೆ ನಡೆದ ಹರ ಜಾತ್ರಾ ಮಹೋತ್ಸವದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಅವರ ಮೂಲಕ ಸಚಿವ ಸ್ಥಾನಕ್ಕೆ ಒತ್ತಾಯಿಸಿ ವಿವಾದ ಸೃಷ್ಠಿಸಿದ್ದ ಶಾಸಕ ಮುರುಗೇಶ್ ನಿರಾಣಿ, ಇಂದು ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ಕಳೆದ ಮಂಗಳವಾರ ದಾವಣಗೆರೆಯಲ್ಲಿಯ ಹರಿಹದ ಹರ ಮಹೋತ್ಸವದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಅವರು ಬಹಿರಂಗ ಸಮಾವೇಶದಲ್ಲಿ ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನ ಕೊಡಲೇಬೇಕು ಎಂದು ಆಗ್ರಹಿಸಿದ್ದಕ್ಕೆ ಸಿಎಂ ಯಡಿಯೂರಪ್ಪ ಸಿಡಿಮಿಡಿಗೊಂಡಿದ್ದರು. ಆ ಘಟನೆ ನಂತರ ಮೊದಲ ಬಾರಿಗೆ ಇಂದು ಮುರುಗೇಶ್ ನಿರಾಣಿ ಅವರು ಸಿಎಂ ಬಿಎಸ್‍ವೈ ಅವರನ್ನು ಭೇಟಿ ಮಾಡಿದರು.
ಈ ಘಟನೆ ನಂತರ ಸ್ವಾಮೀಜಿ ಅವರು ಕ್ಷಮೆ ಕೇಳಿದ್ದರು. ಸಿಎಂ ಅವರು ಕೂಡ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದರು. ಸಿಎಂ ಕೋಪ ತಗ್ಗಿದ ಮೇಲೆ ನಿರಾಣಿ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ. ಮುರುಗೇಶ್ ನಿರಾಣಿ ಜೊತೆ ಸಿಎಂ ಎಂದಿನಂತೆ ಸಹಜವಾಗಿ ಮಾತಾಡಿದರು. ಈ ಸಂದರ್ಭದಲ್ಲಿ ಹರ ಸಮಾವೇಶದಲ್ಲಿ ನಡೆದ ಘಟನೆ ಕುರಿತು ಮುರುಗೇಶ್ ನಿರಾಣಿ, ಸಿಎಂ ಬಳಿ ಕ್ಷಮೆ ಕೇಳಿದ್ದು, ಇದೇ ವೇಳೆ ಮುರುಗೇಶ್ ನಿರಾಣಿ ನಯವಾಗಿ ಸಿಎಂ ಎದುರು ಬೇಡಿಕೆ ಇಟ್ಟದ್ದಾರೆ.
ಮುಖ್ಯಮಂತ್ರಿಗಳು ನಿರಾಣಿಯವರಿಗೆ ಯಾವುದೇ ಭರವಸೆ ನೀಡದೆ, ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ ಎಂದಷ್ಟೇ ಹೇಳಿದ್ದಾರೆ ಅಂತ ಮೂಲಗಳು ತಿಳಿಸಿವೆ.



