Connect with us

Dvgsuddi Kannada | online news portal | Kannada news online

 ಇನ್ಮುಂದೆ ಆನ್ ಲೈನ್ ನಲ್ಲಿ ಸಿಗಲಿದೆ ಮಾವಿನ ಹಣ್ಣು..!

ಪ್ರಮುಖ ಸುದ್ದಿ

 ಇನ್ಮುಂದೆ ಆನ್ ಲೈನ್ ನಲ್ಲಿ ಸಿಗಲಿದೆ ಮಾವಿನ ಹಣ್ಣು..!

ಡಿವಿಜಿ ಸುದ್ದಿ, ಬೆಂಗಳೂರು: ಇನ್ಮುಂದೆ ಬೆಳೆಗಾರನೇ ಬೆಲೆ ನಿಗದಿ ಮಾಡುತ್ತಾನೆ. ಇಂತಹದೊಂದು ಅವಕಾಶವನ್ನು ರಾಜ್ಯ ಸರ್ಕಾರ ಒದಗಿಸಿದೆ. ಇನ್ಮುಂದೆ ಮಾವು  ಆನ್‌ಲೈನ್‌ ನಲ್ಲಿ  ಮಾರಾಟಕ್ಕೆ ಸಿಗಲಿದೆ ಎಂದು ತೋಟಗಾರಿಕ ಸಚಿವ ನಾರಾಯಣಗೌಡ ಹೇಳಿದರು.

ವಿಕಾಸ ಸೌಧದಲ್ಲಿ ಫ್ಲಿಪ್ ಕಾರ್ಟ್ ಸಹಯೋಗದಲ್ಲಿ ಆನ್‌ಲೈನ್‌ ಮೂಲಕ ಮಾವು ಮಾರಾಟಕ್ಕೆ ಸಚಿವರು ಚಾಲನೆ ನೀಡಿ ಮಾತನಾಡಿದರು‌. ಆನ್‌ಲೈನ್‌ ಮೂಲಕ ಮಾವು ಮಾರಾಟ ಆರಂಭಿಸಿದ್ದೇವೆ. ಇದು ಪ್ರಾಯೋಗಿಕ. ಇದರಲ್ಲಿ ಇರುವ ನೂನ್ಯತೆ ಸರಿಪಡಿಸಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತೋತ್ಪನ್ನವನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡುವ ಪ್ರಯತ್ನ ಮಾಡಲಾಗುವುದು ಎಂದರು.

ಈಗ ಮಾವು ಮಾರಾಟ ಶುರುವಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರು ಮಾವು ಖರೀದಿ ಮಾಡಬಹುದು. ಆದರೆ ದರ ನಿಗದಿ ಮಾಡುವ ಹಕ್ಕು ಮಾವು ಬೆಳೆಗಾರನದ್ದೇ ಆಗಿದೆ‌. ಮದ್ಯವರ್ತಿಗಳಿಗೆ ಇಲ್ಲಿ ಅವಕಾಶ ಇರುವುದಿಲ್ಲ. ಇಲ್ಲಿ ಬೆಳೆಗಾರ ನಿಗದಿ ಮಾಡಿದ  ದರವೇ ಅಂತಿಮ  ಎಂದು ತಿಳಿಸಿದರು.

ಫಾರ್ಮರ್ ಪ್ರೊಡ್ಯುಸ್ ಆರ್ಗನೈಸೇಶನ್‌ನಲ್ಲಿ  ಮಾವು ಬೆಳೆಗಾರರು ಹೆಸರು ನೊಂದಾಯಿಸಿಕೊಳ್ಳಬೇಕು. ನೊಂದಾಯಿತ ರೈತರ ಹೆಸರನ್ನು ಫ್ಲಿಪ್‌ಕಾರ್ಟ್‌ನವರು ಪಡೆದು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದಾಗ ರೈತರಿಂದ ನೇರವಾಗಿ ಪಡೆದು ಗ್ರಾಹಕರಿಗೆ ಫ್ಲಿಪ್ ಕಾರ್ಟ್ ತಲುಪಿಸಲಿದೆ.

ಈಗ ಫ್ಲಿಪ್‌ಕಾರ್ಟ್ ಮಾತ್ರ ಈ ಸೇವೆ ನೀಡಲಿದ್ದು, ಮುಂದಿನ ದಿನಗಳ ಆನ್‌ಲೈನ್‌ ಮಾರಾಟ ಸಂಸ್ಥೆ ಮೂಲಕವೂ ಈ ಕಾರ್ಯ ಆರಂಭವಾಗಲಿದೆ. ರೈತರಿಗೆ ಅನುಕೂಲ ಆಗುವಂತ ಮಾರುಕಟ್ಟೆ ನಿರ್ಮಿಸುವ ಬಗ್ಗೆಯೂ ಚಿಂತನೆ ಇದೆ. ಕೃಷಿ ಉತ್ಪನ್ನ ಹಾಳಾಗದಂತೆ  ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ ಎಂದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top