ಡಿವಿಜಿ ಸುದ್ದಿ, ಬೆಂಗಳೂರು: ನನ್ನ ಅಕ್ಕನದ್ದು ಸೈದಾಂತಿಕ ಕೊಲೆ. ಗೌರಿ ಲಂಕೇಶ್ ಸಾವಿನ ಕುರಿತು ಕೆಲವರ ಹೇಳಿಕೆ ತುಂಬಾ ನೋವು ತಂದಿದೆ ಎಂದು ಇಂದ್ರಜಿತ್ ಲಂಕೇಶ್ ಕಣ್ಣೀರು ಹಾಕಿದ್ದಾರೆ.
ತಮ್ಮ ನಿವಾಸದಲ್ಲಿ ಮಾತನಾಡಿರುವ ಇಂದ್ರಜಿತ್, ಅಕ್ಕ ಗೌರಿ ಲಂಕೇಶ್ ಅವರ ಬಗ್ಗೆ ಹೇಳಿಕೆ ತುಂಬಾ ನೋವು ತಂದಿದೆ. ಅವರ ತತ್ವ-ಸಿದ್ಧಾಂತ ಬೇರೆ ಇತ್ತು. ಅವರದ್ದು ಸೈದ್ಧಾಂತಿಕ ಕೊಲೆ. ನಮ್ಮಕ್ಕನನ್ನು ಸಿದ್ಧಾಂತ ದೃಷ್ಟಿಯಿಂದ ಹಲವರು ಒಪ್ಪದಿರಬಹುದು. ಆದರೆ ಒಂದು ಸಾವು ತರುವಷ್ಟೂ ಸಿದ್ಧಾಂತ ಕ್ರೂರಿಯಾ ಎಂದು ಮುತಾಲಿಕ್ ಉಲ್ಲೇಖಿಸದೆ ತಿರುಗೇಟು ನೀಡಿದ್ದಾರೆ.

ಈ ಹಿಂದೆ ಒಬ್ಬ ನಟನ ಕುರಿತು ನಾನು ಹೇಳಿಕೆ ನೀಡಿದೆ. ಆದ್ರೆ ಸಾವಿನ ಬಳಿಕ ಈ ರೀತಿ ಹೇಳಬಾರದು ಎಂದು ನನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದೇನೆ. ನಮ್ಮಕ್ಕನ ಸಾವು ಸಾವಲ್ಲವೇ, ನಮಗೂ ತಾಯಿ ಇಲ್ಲವೇ, ಅವರು ಕ್ಯಾನ್ಸರ್ ರೋಗಿ, ಅವರಿಗೆ ನೋವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಸಾಕ್ಷ್ಯಾಧಾರಗಳನ್ನು ಏನೇನು ಕೊಟ್ಟಿದ್ದೇನೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ತನಿಖೆಗೆ ಸಹಾಯವಾಗಲು ಸಾಕಷ್ಟು ದಾಖಲೆ ಹಾಗೂ ಮಾಹಿತಿಗಳನ್ನು ನೀಡಿದ್ದೇನೆ. ಪೂರಕವಾಗಿ ಇನ್ನೂ ಹೆಚ್ಚಿನ ಮಾಹಿತಿ ಬೇಕಿರುವುದರಿಂದ ಇಂದು ಕರೆದಿದ್ದಾರೆ. ಹೀಗಾಗಿ ಮಾಹಿತಿ ನೀಡಲು, ಸಾಕ್ಷ್ಯಾಧಾರ ನೀಡಲು ತೆರಳುತ್ತಿದ್ದೇನೆ
ಫೀಲ್ಮ್ ಚೇಂಬರ್ ಗೆ ಕೆಟ್ಟ ಹೆಸರು ಬರುತ್ತದೆ ಸುಮ್ಮನೆ ಇರುವುದಕ್ಕೆ ಆಗಲ್ಲ. ಚಿತ್ರರಂಗವನ್ನು ಸ್ವಚ್ಛಗೊಳಿಸಬೇಕಿದೆ. ಇದರಲ್ಲಿ ಇತ್ತೀಚಿನ ನಟ, ನಟಿಯರು ಭಾಗಿಯಾಗಿದ್ದಾರೆ. ಈ ಕುರಿತು ಫಿಲ್ಮ್ ಚೇಂಬರ್ ಎಲ್ಲ ನಟ, ನಟಿಯರನ್ನು ಕರೆಸಿ ಎಚ್ಚರಿಕೆ, ಸಲಹೆ ನೀಡಿದ್ದರೆ ಈ ಮಟ್ಟಕ್ಕೆ ದೊಡ್ಡದಾಗುತ್ತಿರಲಿಲ್ಲ. ಇದಾವುದನ್ನೂ ವಾಣಿಜ್ಯ ಮಂಡಳಿ ಮಾಡಲಿಲ್ಲ. ಮುಂದೆ ಬರುವ ಯುವ, ನಟ, ನಟಿಯರಿಗೆ ಸಹಕಾರಿಯಾಗಲಿದೆ. ಹನಿಟ್ರ್ಯಾಪ್ ವಿಚಾರ ಬಂದಾಗಲೂ ಯಾರೂ ಕರೆಸಿ ಮಾತನಾಡಲಿಲ್ಲ ಎಂದು ಆರೋಪಿಸಿದರು.



