ಕೋಲ್ಕತ್ತಾ: ಕೊರೊನಾ ವೈರಸ್ ಜಾಗೃತಿ ಮತ್ತು ಲಾಕ್‍ಡೌನ್ ಜಾರಿಗೊಳಿಸಲು ಹೋದ ಪೊಲೀಸರ ಮೇಲೆ ಕಲ್ಲೆಸೆದು ಹಲ್ಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಹೌರ ಜಿಲ್ಲೆಯಲ್ಲಿ ನಡೆದಿದೆ.

ಕೋಲ್ಕತ್ತಾ ಸಮೀಪವಿರುವ ಹೌರ ಜಿಲ್ಲೆ ಕೊರೊನಾ ವೈರಸ್ ಹಾಟ್‍ಸ್ಟಾಟ್. ಈ ಹಿನ್ನೆಲೆಯಲ್ಲಿ ಹೌರ ಜಿಲ್ಲೆಯ ಟಿಕಿಯಪುರದ ಮಾರುಕಟ್ಟೆಯಲ್ಲಿ ಜನ ಸಮೂಹ ಸೇರಿತ್ತು. ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿದ್ದಾರೆ. ಈ ವೇಳೆ ಅಲ್ಲಿ ಸೇರಿದ್ದ ಜನಸಮೂಹ ಪೊಲೀಸರ ಮೇಲೆ ದಾಳಿ ಮಾಡಿದೆ.
West Bengal Police personnel attacked by stone-pelting mob for trying to enforce lockdown in Tikiapara, Howrah. Thanks to Mamata Banerjee’ appeasement politics, her loyal voters are now attacking policemen, even while Bengal faces a tough fight against #Covid19 pandemic. pic.twitter.com/TXzNreKvvR
— BJP West Bengal (@BJP4Bengal) April 28, 2020
ಗುಂಪು ಗುಂಪಾಗಿ ಬಂದ ಜನರು ಪೊಲೀಸರ ಮೇಲೆ ಕಲ್ಲುಗಳನ್ನು ತೂರಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಅವರನ್ನು ಸ್ವಲ್ಪ ದೂರ ಓಡಿಸಿಕೊಂಡು ಬಂದಿದ್ದಾರೆ. ಆ ಸಮಯದಲ್ಲಿ ಪೊಲೀಸರು ಟಿಕಿಯಪುರದ ಪೊಲೀಸ್ ಚೌಕಿಗೆ ಓಡಿ ಬಂದಿದರೂ, ಸುಮ್ಮನಗಾದ ಜನರು ಎರಡು ಪೊಲೀಸ್ ವಾಹನಗಳು ಜಖಂಗೊಳಸಿದ್ದಾರೆ.



