ನವದೆಹಲಿ: ತ್ಯಾಜ್ಯ ಮುಕ್ತವಾಗಿರುವ ದೇಶದ ಇತರ ಐದು ನಗರಗಳಲ್ಲಿ ಕರ್ನಾಟಕದ ಸಾಂಸ್ಕೃತಿಕ ನಗರ ಮೈಸೂರು ನಗರ ಸ್ಥಾನ ಪಡೆದಿದೆ. ಈ ಮೂಲಕ ಮೈಸೂರು ಫೈವ್ ಸ್ಟಾರ್ ನಗರಗಳಲ್ಲೊಂದಾಗಿದೆ.
ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸಿರುವ ರಾಷ್ಟ್ರ ಮಟ್ಟದ ಸಮೀಕ್ಷೆಯಲ್ಲಿ ಛತ್ತೀಸ್‌ಗಢದ ಅಂಬಿಕಾಪುರ, ಗುಜರಾತ್‌ನ ರಾಜ್‌ಕೋಟ್ ಮತ್ತು ಸೂರತ್, ಮಧ್ಯಪ್ರದೇಶದ ಇಂದೋರ್ ಹಾಗೂ ಮಹಾರಾಷ್ಟ್ರದ ನವೀ ಮುಂಬಯಿ ನಗರಗಳ ಜೊತಗೆ ಕರ್ನಾಟಕದ ಮೈಸೂರು ಫೈವ್ ಸ್ಟಾರ್ ರೇಟಿಂಗ್ ಪಡೆದಿವೆ.
ತ್ಯಾಜ್ಯ ಸಂಗ್ರಹಣೆ, ಹಸಿ ಮತ್ತು ಒಣ ತ್ಯಾಜ್ಯ ಬೇರ್ಪಡಿಸುವಿಕೆ, ವೈಜ್ಞಾನಿಕ ವಿಲೇವಾರಿ ಮತ್ತು ಸಂಸ್ಕರಣೆ, ಪ್ಲಾಸ್ಟಿಕ್ ಬಳಕೆಯ ನಿಷೇಧ, ಸಾರ್ವಜನಿಕರಿಂದ ಸಮರ್ಪಕ ಶುಲ್ಕ ಸಂಗ್ರಹ ಆಧರಿಸಿ ಆಯಾ ನಗರ ಈ ರೇಟಿಂಗ್ ನೀಡಲಾಗಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವರು ತಿಳಿಸಿದ್ದಾರೆ.ಈ ಹಿಂದೆ ಮೈಸೂರು ಸ್ವಚ್ಛ ನಗರಗಳ ಖ್ಯಾತಿ ಗಳಿಸಿತ್ತು.



