ನವದೆಹಲಿ: ಜಗತ್ತಿನಲ್ಲಿಯೇ ಪ್ರಮುಖ ತಂತ್ರಜ್ಞಾನ ಸಂಸ್ಥೆ ಗೂಗಲ್‌ನ ಭಾರತ ದೇಶದ ಡಿಜಿಟಲೀಕರಣಕ್ಕೆ ಮುಂದಿನ 5 ರಿಂದ 7 ವರ್ಷದಲ್ಲಿ 75,000 ಕೋಟಿ ಹೂಡಿಕೆ ಮಾಡಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಘೋಷಿಸದರು.
ಸೋಮವಾರ ಗೂಗಲ್ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಮಹತ್ವದ ಘೋಷಣೆ ಮಾಡಿದರು. ಭಾರತದ ಡಿಜಿಟಲ್ ಆರ್ಥಿಕತೆ ಹಾಗೂ ಭಾರತದ ಭವಿಷ್ಯ ದೃಷ್ಠಿಯಿಂದ ಗೂಗಲ್ ಹೂಡಿಕೆ ಮಾಡಲಿದೆ. ಇಂಡಿಯಾ ಡಿಜಿಟೈಸೇಷನ್ ಫಂಡ್ ಮೂಲಕ 75,000 ಕೋಟಿ ಹೂಡಿಕೆಯ ಯೋಜನೆ ಇದಾಗಿದೆ ಎಂದರು.
ಭಾರತದ ಡಿಜಿಟಲೀಕರಣವನ್ನೇ ಹೂಡಿಕೆ ಗುರಿಯಾಗಿಸಿಕೊಂಡಿದ್ದು, ನಾಲ್ಕು ಪ್ರಮುಖ ವಲಯಗಳನ್ನು ಗೂಗಲ್ ನಿಗದಿ ಪಡಿಸಿಕೊಂಡಿದೆ ಎಂದರು.
- ಭಾರತದ ಪ್ರಾದೇಶಿಕ ಭಾಷೆಯಲ್ಲಿ ಸುಲಭವಾಗಿ ಮಾಹಿತಿ ಸಿಗುವಂತೆ ಮಾಡುವುದು.
- ಭಾರತದ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಉತ್ಪನ್ನಗಳು ಹಾಗೂ ಸೇವೆಗಳನ್ನು ಅಭಿವೃದ್ಧಿ ಪಡಿಸುವುದು.
- ಉದ್ಯಮ, ವ್ಯವಹಾರಗಳಲ್ಲಿ ಡಿಜಿಟಲೀಕರಣ ಅಳವಡಿಸಿಕೊಳ್ಳುವುದು
- ಆರೋಗ್ಯ, ಶಿಕ್ಷಣ ಹಾಗೂ ಕೃಷಿ ವಲಯಗಳು ತಂತ್ರಜ್ಞಾನ ಬಳಕೆ ಬಗ್ಗೆ ಜಾಗೃತಿ



