ನವದೆಹಲಿ: ಸಿಬಿಎಸ್ ಇ 10 ಮತ್ತು 12ನೇ ತರಗತಿಯ ಫಲಿತಾಂಶವನ್ನು ಜುಲೈ 15ರೊಳಗೆ ಪ್ರಕಟಿಸಲಾಗುವುದು ಎಂದು ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.
ಕೊರೊನಾ ವೈರಸ್ ನಿಂದಾಗಿ 10, 12ನೇ ತರಗತಿಯ ಬಾಕಿ ವಿಷಯಗಳ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ಇದರಿಂದ ಪರ್ಯಾಯ ಮೌಲ್ಯಮಾಪನ ಆಧಾರದಲ್ಲಿ ವಿದ್ಯಾರ್ಥಿಗಳ ಫಲಿತಾಂಶವನ್ನು ಘೋಷಿಸಲಾಗುವುದು ಎಂದು ತಿಳಿಸಿದೆ.
ಅಲ್ಲದೆ 12ನೇ ತರಗತಿ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಮತ್ತೊಂದು ಅವಕಾಶ ನೀಡಿ ಪರೀಕ್ಷೆಗಳನ್ನು ನಡೆಸಲಾಗುವುದು. ಆದರೆ, ಈ ವೇಳೆ ಅಸೆಸ್‌ಮೆಂಟ್ ಸ್ಕೀಂನ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ. ದ್ವಿತೀಯ ಬಾರಿ ನಡೆಸಿದ ಪರೀಕ್ಷೆಗಳ ಅಂಕಗಳೇ ಅಂತಿಮವಾಗಿರುತ್ತವೆ .
10ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷಾ ಬರೆಯಲು ಅವಕಾಶವಿರುವುದಿಲ್ಲ. ಅಸೆಸ್‌ಮೆಂಟ್ ಸ್ಕೀಂನ ಆಧಾರದಲ್ಲಿ ಅವರ ಪರೀಕ್ಷಾ ಫಲಿತಾಂಶವನ್ನು ಘೋಷಿಸಲಿದ, ಅಸೆಸ್‌ಮೆಂಟ್ ಸ್ಕೀಂನ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ ಬಳಿಕ ಮಂಡಳಿ ಫಲಿತಾಂಶ ಪ್ರಕಟಿಸಲು ನಿರ್ಧರಿಸಿದೆ.



