Connect with us

Dvgsuddi Kannada | online news portal | Kannada news online

ಹೆಣ್ಣು ಮಗುವಿಗೆ ಕೊರೊನಾ ಎಂದು ನಾಮಕರಣ

ಪ್ರಮುಖ ಸುದ್ದಿ

ಹೆಣ್ಣು ಮಗುವಿಗೆ ಕೊರೊನಾ ಎಂದು ನಾಮಕರಣ

ಲಕ್ನೋ: ಕೊರೊನಾ ವೈರಸ್‍ಗೆ ಇಡೀ ದೇಶವೇ ತಲ್ಲಣಗೊಂಡಿದೆ. ದೇಶದಲ್ಲಿಯೂ ಕೊರೊನಾ ಸೋಂಕಿತರ ಪ್ರಕರಣಗಳು  ಹೆಚ್ಚಾಗುತ್ತಿವೆ. ಇದರ  ಮಧ್ಯೆ ಕೊರೊನಾ ವೈರಸ್ ಹೆಸರನ್ನು ಉತ್ತರ ಪ್ರದೇಶದ ನವಜಾತ ಹೆಣ್ಣು ಶಿಶುವೊಂದಕ್ಕೆ ಹೆಸರಿಡಲಾಗಿದೆ.

ಭಾನುವಾರ ಗೋರಖಪುರದ ಸೊಹಗೌರಾ ಗ್ರಾಮದಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆ ಬಳಿಕ ಮಗುವಿನ ಚಿಕ್ಕಪ್ಪ ಕೊರೊನಾ ಎಂದು ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಗುವಿಗೆ ಹೆಸರಿಟ್ಟಿದ್ದನ್ನು ಸಮರ್ಥಿಸಿಕೊಂಡಿರುವ ಚಿಕ್ಕಪ್ಪ ನಿತೇಶ್ ತ್ರಿಪಾಠಿ, ಕೊರೊನಾ ಸೋಂಕು ಭಯಾನಕ ಎನ್ನುವುದರಲಿ ಯಾವುದೇ ಸಂದೇಹವೇ ಇಲ್ಲ. ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಅನೇಕ ಜನರನ್ನು ಬಲಕೊರೊನಾ ವೈರಸ್‍ನಿಂದಾಗಿ ಕೆಲವು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ.‌ಜತ್ತಿನ ಎಲ್ಲಾ ದೇಶಗಳು ಒಂದಾಗಿ ಹೋರಾಡುತ್ತಿವೆ. ಹೀಗಾಗಿ ಈ ಮಗು ದುಷ್ಟರ ವಿರುದ್ಧ ಹೋರಾಡಲು ಜನರ ಒಗ್ಗಟ್ಟಿನ ಸಂಕೇತವಾಗಿರುತ್ತದೆ ಎಂದು ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top