ಡಿವಿಜಿ ಸುದ್ದಿ, ಬೆಂಗಳೂರು: ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಉಳಿದುಕೊಂಡಿದ್ದ ಎಂಬೆಸಿ ರೆಸಾರ್ಟ್‌ಗೆ ಆಗಮಿಸಿದ ಕಾಂಗ್ರೆಸ್ ಮುಖಂಡ ಜಿತು ಪಟ್ವಾರಿ, ಶಾಸಕರ ರೂಮ್ ಗೆ ಹೋಗಲು ಯತ್ನಿಸಿದನ್ನು ತಡೆದಿದಕ್ಕೆ ಪೊಲೀಸರ ಮೇಲೆ ಕೈ ಮಾಡಿದ್ದಾನೆ. ಕರ್ತವ್ಯ ನರತ ಪೊಲೀಸರು ಮೇಲೆ ಕೈ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಜಿತು ಪಟ್ವಾರಿ ಚಿಕ್ಕಜಾಲ ವ್ಯಾಪ್ತಿಯ ಬಿಲ್ಲಮಾರನಹಳ್ಳಿಯ ಎಂಬೆಸಿ ರೆಸಾರ್ಟ್ ಬಳಿ ಬಂದಾಗ ಇನ್ಸ್‌ಪೆಕ್ಟರ್ ಅಲ್ಲಿಗೆ ಆಗಮಿಸಿದ್ದಾರೆ. ಪಟ್ವಾರಿ ಅವರು ಮೊಬೈಲ್‌ನಲ್ಲಿ ಮಾತನಾಡುತ್ತಾ ಶಾಸಕರಿದ್ದ ರೆಸಾರ್ಟ್‌ನ ಬಾಗಿಲ ಬಳಿ ಬಂದಿದ್ದಾರೆ.
ಆಗ ಪೊಲೀಸ್ ಅಧಿಕಾರಿ ಅವರನನ್ನು ತಡೆದಿದ್ದಕ್ಕೆ ಕೋಪಗೊಂಡ ಜಿತು ಇನ್ಸ್‌ಪೆಕ್ಟರ್‌ರನ್ನು ನೂಕಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಬೆಳೆದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ನಂತರ ಪೊಲೀಸರ ಮೇಲೆ ಕೈ ಮಾಡಿದರೆಂಬ ಆರೋಪದ ಮೇಲೆ ಜಿತು ಪಟ್ವಾರಿ ಅವರನ್ನು ವಶಕ್ಕೆ ಪಡೆದ ಪೊಲೀಸರು ಕೂಡಲೆ ಚಿಕ್ಕಜಾಲ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
Karnataka: Scuffle broke out between Congress leader Jitu Patwari and a police personnel, while Patwari was trying to meet the Madhya Pradesh rebel MLAs at Embassy Boulevard in Bengaluru. (Video Source: Congress) https://t.co/hsrLf7DtZN
— ANI (@ANI) March 12, 2020
ಮಧ್ಯಪ್ರದೇಶದ 21 ಮಂದಿ ಶಾಸಕರು ಬೆಂಗಳೂರಿನ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದು, ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುವ ಹಂತಕ್ಕೆ ಬಂದು ನಿಂತಿದೆ. ರೆಸಾರ್ಟ್ ಸುತ್ತಲೂ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.



