ಡಿವಿಜಿ ಸುದ್ದಿ, ಶಿವಮೊಗ್ಗ: ಕೊರೊನಾ ವೈರಸ್ ನಿಯಂತ್ರಣಕ್ಕೆ ಆಯುರ್ವೇದ ಚಿಕಿತ್ಸೆ ಪದ್ಧತಿ ಪ್ರಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಾಗಬೇಕು ಎಂದು ಎಂಎಲ್ಸಿ ರುದ್ರೇಗೌಡ ಪತ್ರ ಬರೆದಿದ್ಧಾರೆ.
ಕೊರೊನಾ ವೈರಸ್ ಗೆ ಔಷಧಿ ಕಂಡುಹಿಡಿಯಲು ಪ್ರಯೋಗಿಕವಾಗಿ ಹಲವಾರು ಪ್ರಯತ್ನಗಳು ನಡೆಯುತ್ತಿದ್ದು, ಆಯುರ್ವೇದದ ಅನುಭವಿ ವೈದ್ಯರು ತಮ್ಮ ಸಲಹೆಯ ಒಂದು ವರದಿಯನ್ನು ನೀಡಿದ್ದಾರೆ. ಆಯುರ್ವೇದ ಔಷಧೋಪಚಾರಗಳು ಈಗಾಗಲೇ ಕೇರಳ ರಾಜ್ಯದಲ್ಲಿ ಉತ್ತಮ ಫಲಿತಾಂಶವನ್ನು ದೊರಕಿದ್ದು ಕೈತಪ್ಪಿದ ಕೇರಳ ಸ್ಥಿತಿ ಹತೋಟಿಗೆ ಬಂದಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜ್, ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸಲ್ಲಿಸುತ್ತಿರುವ ಡಾ ಅಶೋಕ್ ಕುಮಾರ್ ಅವರು, ಕೊರೊನಾ ವೈರಸ್ ಬಗ್ಗೆ ಕೇರಳ ರಾಜ್ಯವು ಅನುಸರಿಸಿದ ಆಯುರ್ವೇದ ಪದ್ಧತಿಯ ಸಂಪೂರ್ಣ ಫಲಕಾರಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುತ್ತಾರೆ.
ಹೆಸರಾಂತ ಆಯುರ್ವೇದ ವೈದ್ಯ ಡಾ. ನಾಗೇಂದ್ರ ರಂತಹ ಮಾರ್ಗದರ್ಶನದಲ್ಲಿ ಪ್ರಾಯೋಗಿಕವಾಗಿ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಆಯುರ್ವೇದ ಅನುಷ್ಠಾನಗೊಳಿಸಲು ಸಾಧ್ಯವಿದೆ. ನೈಸರ್ಗಿಕವಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ತುಂಬುವುದರ ಜೊತೆಗೆ ಮಹಾಮಾರಿ ಕೋವೀಡ್ -19 ಅನ್ನು ನಿಯಂತ್ರಿಸುವ ನಿಯಂತ್ರಿಸಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಪತ್ರದಲ್ಲಿ ರುದ್ರೇಗೌಡರು ಮನವಿ ಮಾಡಿದ್ದಾರೆ .



