Connect with us

Dvgsuddi Kannada | online news portal | Kannada news online

ಎಂಇಎಸ್ ಶಿಕ್ಷಣ ಸಂಸ್ಥೆಯಿಂದ ಕೌಶಲ್ಯಾಧಾರಿತ ಉಚಿತ ತರಬೇತಿ

ದಾವಣಗೆರೆ

ಎಂಇಎಸ್ ಶಿಕ್ಷಣ ಸಂಸ್ಥೆಯಿಂದ ಕೌಶಲ್ಯಾಧಾರಿತ ಉಚಿತ ತರಬೇತಿ

ಡಿವಿಜಿಸುದ್ದಿ,ದಾವಣಗೆರೆ: ಎಂಇಎಸ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ನಿರುದ್ಯೋಗಿಗಳಿಗೆ ಕೌಶಲ್ಯಾಧಾರಿತ ಉಚಿತ ತರಬೇತಿ ಮತ್ತು ಉದ್ಯೋಗಾವಕಾಶ ನೀಡಲಿದೆ.ಅ.21 ರಂದು ತರಬೇತಿ ಪ್ರಾರಂಭವಾಗಲಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನೆಸಿದ ಕಾಲೇಜಿನ ಪ್ರಾಚಾರ್ಯ ವೆಂಕಟೇಶ್ ಅವರು, ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯು ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಡಿ ಪಿಯುಸಿ ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿಗಳಿಗೆ ಟೆಲಿಕಾಮ್ ಕಸ್ಟಮರ್ ಕೇರ್ ರಿಲೇಷನ್ ಶಿಪ್, ಡಾಟಾ ಎಂಟ್ರಿ ಆಪರೇಟಿಂಗ್, ಸೇಲ್ಸ್ ಅಸೋಸಿಯೇಟ್ ಎಂಬ  ಕೌಶಲ್ಯಾಧಾರಿತ ಉಚಿತ ತರಬೇತಿ ನೀಡಲಾಗುವುದು ಎಂದರು.

ಶೇ. 100 ರಷ್ಟು ಉದ್ಯೋಗವಕಾಶ ಕಲ್ಪಿಸಿಕೊಡುವ ಜವಾಬ್ದಾರಿ ನಮ್ಮದಾಗಿದ್ದು, ಎರಡುವರೆ ತಿಂಗಳ ತರಬೇತಿ ನೀಡಲಾಗುವುದು.  ಬೆಳಗ್ಗೆ ಹಾಗು ಮಧ್ಯಾಹ್ನ 2 ಬ್ಯಾಚ್ ಗಳಿವೆ. ಬಡ ಹಾಗೂ ನಿರುದ್ಯೋಗಿಗಳಿಗೆ ಈ ತರಬೇತಿಗಳಿಂದ ಅನುಕೂಲವಾಗಲಿದ್ದು, ತರಬೇತಿ ನಂತರ ಸೂಕ್ತ ಉದ್ಯೋಗವಕಾಶ ಕಲ್ಪಿಸಲಾಗುವುದು.

ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಉದ್ಯೋಗ ಅವಕಾಶ ಸಿಗಬಹುದು.ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಪ್ರಮಾಣ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9880436414, 9964868683 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಕೆ.ಎಂ.ಪ್ರದೀಪ್, ನಂದೀಶ್, ಜೆ.ಪಿ.ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top