Connect with us

Dvgsuddi Kannada | online news portal | Kannada news online

ಕೊರೊನಾ ಭೀತಿ: ಮದುವೆಗೆ ರೂಲ್ಸ್ ನಿಗದಿ ಮಾಡಿದ ಸರ್ಕಾರ

ಪ್ರಮುಖ ಸುದ್ದಿ

ಕೊರೊನಾ ಭೀತಿ: ಮದುವೆಗೆ ರೂಲ್ಸ್ ನಿಗದಿ ಮಾಡಿದ ಸರ್ಕಾರ

ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್  ಹಿನ್ನೆಲೆ ಮದುವೆ ಸಮಾರಂಭಗಳಿಗೆ ನಿರ್ಬಂಧ ವಿಧಿಸಿದ್ದ ರಾಜ್ಯ ಸರ್ಕಾರ ಇದೀಗ ಸ್ವಲ್ಪ ನಿಯಮ ಸಡಿಸಿಲಿಸಿದೆ.  17 ರೂಲ್ಸ್ ಗಳೊಂದಿಗೆ ಮದುವೆ ಸಮಾರಂಭಕ್ಕೆ  ಅವಕಾಶ ಕಲ್ಪಿಸಿಕೊಟ್ಟಿದೆ.

ಲಾಕ್‍ಡೌನ್  ನಿಯಮವನ್ನು  ರಾಜ್ಯ ಸರ್ಕಾರ ಹಂತ ಹಂತವಾಗಿ ಸಡಿಲಗೊಳಿಸುತ್ತಿದೆ. ಈ ಹಿನ್ನೆಲೆ ಮದುವೆ ಸಮಾರಂಭಗಳಿಗೂ ಕೆಲ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದ್ದು, ಮದುವೆ ಸಮಾರಂಭದಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಮ ಪಾಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.

ಸರ್ಕಾರ ಹೊರಡಿಸಿರುವ ನಿಯಮಗಳು ಯಾವುದು?

  •  ಮದುವೆಗಳಿಗೆ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಅನುಮತಿ ಕಡ್ಡಾಯ
  •  ಒಂದು ಮದುವೆಯಲ್ಲಿ 50 ಜನಕ್ಕಿಂತ ಹೆಚ್ಚು ಜನ ಸೇರುವ ಹಾಗಿಲ್ಲ
  •  ಸೂಕ್ತ ಸಾರ್ವಜನಿಕ ಸ್ಥಳ ಮತ್ತಿ ನೈಸರ್ಗಿಕ ವಾತಾವರಣ ಇರುವೆಡೆ ಮದುವೆ
  • ಮದುವೆಗಳಲ್ಲಿ ಎಸಿಗಳು ನಿರ್ಬಂಧ
  • ಗರ್ಭಿಣಿಯರು, 65 ವರ್ಷ ಮೇಲ್ಪಟ್ಟ ವೃದ್ಧರು, 10 ವರ್ಷದೊಳಗಿನ ಮಕ್ಕಳಿಗೆ ನಿರ್ಬಂಧ
  • ಕಂಟೈನ್ಮೆಂಟ್ ವಲಯದವರಿಗೆ ನಿರ್ಬಂಧ
  • ಮದುವೆ ಸ್ಥಳಗಳ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ
  • ಮದುವೆಗೆ ಬರೋರಿಗೆ ಮಾಸ್ಕ್ ಕಡ್ಡಾಯ
  • ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. 99.5 ಸೆಲ್ಸಿಯಸ್ ಉಷ್ಣತೆ, ಜ್ವರ, ಕೆಮ್ಮು, ನೆಗಡಿ, ಉಸಿರಾಟ ಸಮಸ್ಯೆ ಇರೋರನ್ನು   ನಿರ್ಬಂಧಿಸಲಾಗಿದೆ
  •  ಒಂದು ಮೀಟರ್ ಸಾಮಾಜಿಕ ಅಂತರ
  • ಸಾಬೂನಿನಲ್ಲಿ ಹ್ಯಾಂಡ್ ವಾಷ್ ಗೆ ವ್ಯವಸ್ಥೆ ಇರಬೇಕು
  •  ಸಾರ್ವಜನಿಕವಾಗಿ ಉಗುಳುವಂತಿಲ್ಲ
  • ಮದುವೆಗಳಲ್ಲಿ ಒಬ್ಬ ನೋಡಲ್ ಅಧಿಕಾರಿಯಿರುವುದು ಕಡ್ಡಾಯ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top