ಡಿವಿಜಿ ಸುದ್ದಿ, ಹಾವೇರಿ: ಮೆಕ್ಕೆಜೋಳದ ಬೆಲೆ ಭಾರೀ ಕುಸಿತ ಹಿನ್ನೆಲೆ ಕೊಯ್ಲಿಗೆ ಬಂದಿದ್ದ ಮೆಕ್ಕೆಜೋಳ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ರೈತ ನಾಶಪಡಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೊಸಶಿಡೇನೂರು ಗ್ರಾಮ ರೈತ ಮಾದೇವಪ್ಪ ಒಡೇನಪುರ ಅವರು ಒಂದು ಎಕರೆ ಇಪ್ಪತ್ತು ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ನಾಶಪಡಿಸಿದ್ದಾರೆ. ಕೊರೊನಾ ಭೀತಿಯಿಂದ ಮೆಕ್ಕೆಜೋಳದ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಒಂದು ಕ್ವಿಂಟಾಲ್ ಮೆಕ್ಕೆಜೋಳದ ಬೆಲೆ ಕೇವಲ ಒಂದು ಸಾವಿರ ರೂಪಾಯಿಗೆ ಕುಸಿದಿದೆ. ಇದರಿಂದ ಬೇಸತ್ತ ರೈತ, ಬೆಳೆ ನಾಶ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಪ್ರತಿ ಕ್ವಿಂಟಲ್ ಗೆ 2 ಸಾವಿರ ರೂಪಾಯಿ ಮಾರಾಟವಾಗಿತ್ತು. ಇದೀಗ ಬೆಲೆ ಒಂದು ಸಾವಿರ ರೂಪಾಯಿಗೆ ಕುಸಿದಿದ್ದರಿಂದ ರೈತ ಬೆಳೆ ನಾಶ ಮಾಡಿದ್ದಾರೆ.



