ಡಿವಿಜಿ ಸುದ್ದಿ ದಾವಣಗೆರೆ : ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ 17 ರಲ್ಲಿನ ಸಾಮಾನ್ಯ ಕ್ಷೇತ್ರದಿಂದ ಸಾಮಾಜಿಕ ಹೋರಾಟಗಾರ ಎಂ.ಜಿ. ಶ್ರೀಕಾಂತ್ ಕಮ್ಯೂನಿಸ್ಟ್ ಪಕ್ಷದಿಂದ ಕಣಕ್ಕೆ ಇಳಿದಿದ್ದಾರೆ.
ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ ಅವರು ಪಕ್ಷದ ಕಚೇರಿಯಲ್ಲಿ ಶ್ರೀಕಾಂತ್ ಅವರಿಗೆ ಬಿ ಫಾರಂ ನೀಡಿದರು.
ಅ.31 ರಂದು ನಾಮ ಪತ್ರ ಸಲ್ಲಿಕೆ ಮಾಡಲಿದ್ದು, ದಾವಣಗೆರೆ ಪಿ ಜೆ ಬಡಾವಣೆಯಿಂದ ಕಣಕ್ಕೆ ಇಳಿದ್ದಾರೆ. ಅಂದು ಬೆಳಗ್ಗೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂಜೆ ಸಲ್ಲಿಸಿ 11.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.