ಡಿವಿಜಿಸುದ್ದಿ.ಕಾಂ, ದಾವಣಗೆರೆ: ಜಿಲ್ಲಾ ಮಡಿವಾಳ ಸಂಘದಿಂದ ನಗರದ ತ್ರಿಶೂಲ್ ಕಲಾ ಭವನದಲ್ಲಿ ಅ.20 ರಂದು ಬೆಳಗ್ಗೆ 10.30 ಕ್ಕೆ 2018-19 ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿನ್ವಿತ ಪುರಸ್ಕಾರ ಮತ್ತು ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಿದೆ.
ಸಂಘದ ಜಿಲ್ಲಾಧ್ಯಕ್ಷ ಎಂ.ಉಮಾಪತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಶಿವಯೋಗಾನಂದ ಸ್ವಾಮೀಜಿ, ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಶ್ರೀ ಮುಕ್ತಾನಂದ ಸ್ವಾಮೀಜಿ, ಬಸವರಾಜೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕಪರಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ಉಮಾಪತಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಕಾರ್ಯದರ್ಶಿ ರೇಣುಕಾಚಾರ್ಯ, ಸಂಸದ ಜಿ.ಎಂ.ಸಿದ್ದೇಶ್ವರ್, ವೈ.ದೇವೇಂದ್ರಪ್ಪ, ಶಾಸಕ ಎಸ್.ಎ.ರವೀಂದ್ರನಾಥ್, ಪಿ.ಟಿ.ಪರಮೇಶ್ವರ ನಾಯ್ಕ, ಎಸ್.ವಿ.ರಾಮಚಂದ್ರಪ್ಪ, ಕೆ.ಮಾಡಾಳ್ ವಿರುಪಾಕ್ಷಪ್ಪ, ಜಿ.ಕರುಣಾಕರ ರೆಡ್ಡಿ, ಪ್ರೊ.ಲಿಂಗಣ್ಣ, ಎಸ್.ರಾಜಪ್ಪ, ಕರ್ನಾಟಕ ರಾಜ್ಯ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
275 ವಿದ್ಯಾರ್ಥಿಗಳನ್ನು ಮತ್ತು ಎಂ.ಗಂಗಮ್ಮ ಮತ್ತು ಎಂ.ಉಮಾಪತಿ, ಎಂ.ಕೊಟ್ರಪ್ಪ, ಎಂ.ಗುರುನಂದಪ್ಪ, ಕೆ.ಎಂ.ನಾಗರಾಜಪ್ಪ, ಶೇಖರಪ್ಪ, ಎಸ್.ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಗುವುದು. ತ್ರಿಶೂಲ್ ಕಲಾ ಭವನದ ಮಾಲೀಕರಾದ ಶೋಭಾ ಮತ್ತು ಜೆ.ಆರ್.ಶಿವಕುಮಾರ್ ದಂಪತಿಗಳಿಗೆ ಗೌರವ ಸರ್ಮಪಣೆ ಮಾಡಲಾಗುವುದು ಎಂದು ಹೇಳಿದರು.
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಕುರಿತು ಅ. 20ರಂದು ಮಧ್ಯಾಹ್ನ 3ಕ್ಕೆ ರಾಜ್ಯ ಮಟ್ಟದ ಸಭೆ ಕರೆದಿದ್ದು, ಹೋರಾಟದ ರೂಪರೇಷಗಳ ಕುರಿತು ಚರ್ಚಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ.ಎಚ್.ಗುಡ್ಡಪ್ಪ, ಎಂ.ಎಚ್.ಭೀಮಣ್ಣ, ರೇವಣಸಿದ್ದಪ್ಪ, ಬಿ.ರಮೇಶ್, ಮಹೇಶ್ವರಪ್ಪ, ಮಹಾಂತೇಶ್, ಆರ್.ಹನುಮಂತಪ್ಪ, ಬಸವರಾಜಪ್ಪ ಇತರರು ಇದ್ದರು.



