ಡಿವಿಜಿಸುದ್ದಿ.ಕಾಂ. ನ್ಯಾಮತಿ: ವಿಷಪೂರಿತ ಸೊಪ್ಪು ತಿಂದು 150 ಕುರಿಗಳು ಮೃತಪಟ್ಟ ಘಟನೆ ನ್ಯಾಮತಿ ತಾಲೂಕಿನ ಜಯನಗರದಲ್ಲಿ ನಡೆದಿದೆ. ಕುರಿಗಾಯಿ ಮೈಲಪ್ಪ ಎಂಬಾತ ತನ್ನ ಕುರಿಗಳನ್ನು ಜಮೀನೊಂದರಲ್ಲಿ ಬೀಡುಬಿಟ್ಟಿದ್ದ. ನಿನ್ನೆ ವಿಷಪೂರಿತ ಮೇವು ತಿಂದ ಕುರಿಗಳು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿವೆ.

ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುರಿ ಸಾವಿನಿಂದ ಲಿಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ಸೂಕ್ತ ಪರಿಹಾರ ನೀಡಬೇಕೆಂದು ಕುರಿಗಾಯಿ ಮೈಲಪ್ಪ ಮನವಿ ಮಾಡಿದ್ದಾರೆ.



