ಡಿವಿಜಿ ಸುದ್ದಿ, ಬಳ್ಳಾರಿ: ಜಿಲ್ಲೆಯ ಕೊಟ್ಟೂರಿನಲ್ಲಿ ಫೆ.18 ರಂದು ಕೊಟ್ಟೂರು ಶ್ರೀಗುರುಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಲಿದೆ.
ಫೆ.14 ರಂದು ಬೆಳ್ಳಿಯ ರಥದಲ್ಲಿ ನಾಗರೋತ್ಸವ ನಡೆಯುವುದು. ಫೆ.15 ರಂದು ಬೆಳ್ಳಿಯ ನವಿಲು ವಾಹನೋತ್ಸವ, ಫೆ.16 ರಂದು ಗಜ ವಾಹನೋತ್ಸವ, ಫೆ.17 ರಂದು ವೃಷಭ ವಾಹನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಫೆ.18 ರಂದು ಶ್ರೀಗುರುಬಸವೇಶ್ವರ ಸ್ವಾಮಿ ರಥೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.