ಡಿವಿಜಿ ಸುದ್ದಿ, ಹರಪನಹಳ್ಳಿ: ಫೆ.18 ರಂದು ಕೊಟ್ಟೂರಿನಲ್ಲಿ ನಡೆಯುವ ಶ್ರೀ ಗುರುಕೊಟ್ಟುರೇಶ್ವರ ಮಹಾರಥೋತ್ಸವಕ್ಕೆ ಬರುವ ಪಾದಯಾತ್ರಿಗಳಿಗೆ ಉಚ್ಚಂಗಿದುರ್ಗ ಗ್ರಾಮಸ್ಥರು ಅನ್ನ ಸಂತರ್ಪಣೆ ಆಯೋಜಿಸಿದ್ದಾರೆ.
ಚನ್ನಗಿರಿ ಸೇರಿದಂತೆ ದೂರದ ಊರುಗಳಿಂದ ಬರುವ ಪಾದಯಾತ್ರೆಗಳು ಗ್ರಾಮದ ಮೂಲಕ ಹೋಗಲಿದ್ದಾರೆ. ಚನ್ನಗಿರಿ ಭಕ್ತರು ಆನಗೋಡು, ಅಣಜಿ ಮೂಲಕ ಉಚ್ಚoಗಿದುರ್ಗಕ್ಕೆ ಫೆ.15 ರಂದು ಶನಿವಾರ ಸಂಜೆ 7.30ಕ್ಕೆ ಕೇಳಕೋಟೆ ಆಂಜನೇಯ ದೇವಸ್ಥಾನದ ಆವರಣಕ್ಕೆ ಬರಲಿದ್ದಾರೆ. ಬಂದ ಭಕ್ತರಿಗೆ ಅನ್ನ ಸಂತರ್ಪಣೆಯು ನಡೆಯುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.