Connect with us

Dvg Suddi-Kannada News

ಹಿರೇ ಕೋಗಲೂರು ಗ್ರಾಮ ಪಂಚಾಯತಿಯಲ್ಲಿ  ಪ್ಲಾಸ್ಟಿಕ್ ನಿಷೇಧದ  ಬಗ್ಗೆ ಜಾಗೃತಿ

ಚನ್ನಗಿರಿ

ಹಿರೇ ಕೋಗಲೂರು ಗ್ರಾಮ ಪಂಚಾಯತಿಯಲ್ಲಿ  ಪ್ಲಾಸ್ಟಿಕ್ ನಿಷೇಧದ  ಬಗ್ಗೆ ಜಾಗೃತಿ

ಡಿವಿಜಿಸುದ್ದಿ.ಕಾಂ, ಚನ್ನಗಿರಿ : ತಾಲೂಕಿನ ಹಿರೇ ಕೋಗಲೂರು ಗ್ರಾಪಂ ವತಿಯಿಂದ ಪ್ಲಾಸ್ಟಿಕ್ ನಿಷೇಧದ ಬಗ್ಗೆ  ಜಾಗೃತಿ ಮೂಡಿಸಲು ಇಂದು ಜಾಥ ನಡೆಸಲಾಯಿತು .  ಪ್ಲಾಸ್ಟಿಕ್ ನಿಷೇಧ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಜಾಥಾ ಉದ್ದೇಶವಾಗಿತ್ತು.

ಕ್ಯಾರಿಬ್ಯಾಗ್ , ಪ್ಲಾಸ್ಟಿಕ್ ಭಿತ್ತಿಚಿತ್ರಗಳು, ಪ್ಲಾಸ್ಟಿಕ್ ತಟ್ಟೆ , ಲೋಟ ,ಚಮಚ , ಪ್ಲಾಸ್ಟಿಕ್ ಹಾಳೆ  ಹಾಗೂ ಥರ್ಮಕೂಲ್ ಮೈಕ್ರೋ ಬೀಡ್ಸ್ ನಿಂದ ತಯರಾದಂತಹ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ನಿಷೇಧಿಸಿರುವ ಬಗ್ಗೆ ಗ್ರಾಮದ ಬೀದಿ ಬೀದಿಗಳಲ್ಲಿ ಜಾಥ ನಡೆಸಲಾಯಿತು .

ನಿಷೇದಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದರಿಂದ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ  ಪರಿಸರಕ್ಕೆ ಹಾನಿಯನ್ನು ಮತ್ತು ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡುವುದರಿಂದ ಪ್ಲಾಸ್ಟಿಕ್ ತ್ಯಾಜ್ಯಗಳು ಎಲ್ಲೆಂದರಲ್ಲಿ ಚರಂಡಿ ಮೋರಿಗಳಲ್ಲಿ , ಒಳ ಚರಂಡಿಗಳಲ್ಲಿ ಸರಾಗ ಹರಿವಿಗೆ ತಡೆಯನ್ನು ಉಂಟು ಮಾಡುವುದರಿಂದ ಸ್ವಚ್ಛತೆಯು ಹಾಳಾಗುತ್ತದೆ.  ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಪ್ಲಾಸ್ಟಿಕ್ ನಿಷೇದದ ಕಾನೂನನ್ನು ಉಲ್ಲಂಘನೆ ಮಾಡಿದರೆ ಕಾನೂನಿ ಅಡಿಯಲ್ಲಿ ಶಿಕ್ಷಗೆ ಗುರಿಯಾಗ ಬೇಕಾಗುತ್ತದೆ ಎಂದು ಗ್ರಾಮಸ್ಥರಿಗೆ ಮತ್ತು ಅಂಗಡಿಗಳ ಮಾಲಿಕರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಪ್ಲಾಸ್ಟಿಕ್ ಮುಕ್ತ ಪಂಚಾಯಿತಿಯನ್ನಾಗಿಸಲು ಸಹಕರಿಸಬೇಕೆಂದು ಮನವಿ ಮಾಡಲಾಯಿತು.  ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಅನುಭಾಗ್ಯಮ್ಮ ಜಗದೀಶ್ , ಉಪಾಧ್ಯಕ್ಷ  ಶಂಕರಮ್ಮ ರವೀಂದ್ರ ಕುಮಾರ್ , ಗ್ರಾಪಂ ಕಾರ್ಯದರ್ಶಿ ಹೆಚ್. ಯು. ಕರಿಸಿದ್ದಪ್ಪ,  ಗ್ರಾಪಂ  ಸದಸ್ಯರು, ಸಿಬ್ಬಂದಿ ವರ್ಗದವರು   ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top