Connect with us

Dvg Suddi-Kannada News

ವಿಡಿಯೋ: ಕ್ಷಣಾರ್ಧದಲ್ಲಿ 90 ಫ್ಲ್ಯಾಟ್ ಹೊಂದಿದ್ದ ಅಪಾರ್ಟ್ ಮೆಂಟ್ ನೆಲಸಮ..!

ಪ್ರಮುಖ ಸುದ್ದಿ

ವಿಡಿಯೋ: ಕ್ಷಣಾರ್ಧದಲ್ಲಿ 90 ಫ್ಲ್ಯಾಟ್ ಹೊಂದಿದ್ದ ಅಪಾರ್ಟ್ ಮೆಂಟ್ ನೆಲಸಮ..!

ತಿರುವನಂತಪುರಂ: ಎಲ್ಲರಿಗೂ ನಗರದಲ್ಲಿ ಮನೆ, ಫ್ಲ್ಯಾಟ್ ಕೊಂಡುಕೊಳ್ಳಬೇಕು ಅಂತಾ ಆಸೆ ಇರುತ್ತೆ. ಆದರೆ, ಅದೇ ಫ್ಲ್ಯಾಟ್ ಕ್ಷಣಾರ್ಧದಲ್ಲಿ ನೆಲಕ್ಕೆ ಉರುಳಿದರೆ ಹೇಗಿರುತ್ತೆ…? ಕೇರಳದಲ್ಲಿ ಕ್ಷಣಾರ್ಧರದಲ್ಲಿಯೇ 90 ಫ್ಲ್ಯಾಟ್ ನ ಅಪಾರ್ಟ್ ಮೆಂಟ್ ನೆಲಸಮವಾಗಿದೆ.

ಕೇರಳ ರಾಜ್ಯದಲ್ಲಿ ನಿಯಮಮೀರಿ ಕೆರೆ ದಂಡೆಯ ಮೇಲೆ ಅಕ್ರಮವಾಗಿ ಕಟ್ಟಿದ್ದ ಅಪಾರ್ಟ್​ಮೆಂಟ್​ಗಳನ್ನು ನೆಲಸಮ ಮಾಡುವ ಕೆಲಸ ಶುರುವಾಗಿದೆ. ಇದರ ಪರಿಣಾಮ ಕೇರಳದ ಕೊಚ್ಚಿಯ ತೀರ ಪ್ರದೇಶದ ಮರಡು ವಸತಿ ಪ್ರದೇಶದ ಹಿನ್ನೀರಿನಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ನಾಲ್ಕು ಗಗನಚುಂಬಿ ಅಪಾರ್ಟ್​ಮೆಂಟ್​ಗಳ ನೆಲಸಮ ಮಾಡಲು ಕೋರ್ಟ್ ಆದೇಶ ನೀಡಿದೆ.  4 ಅಪಾರ್ಟ್​ಮೆಂಟ್​ಗಳ ಪೈಕಿ  ಇಂದು 2 ಅಪಾರ್ಟ್​ಮೆಂಟ್​ಗಳನ್ನು 800 ಕೆಜಿ ಸ್ಫೋಟಕ ಬಳಸಿ ನೆಲಸಮ ಮಾಡಲಾಗಿದೆ.

ಕೋಸ್ಟಲ್ ರೆಗ್ಯುಲೇಷನ್ ಝೋನ್ ರೂಲ್ಸ್ ಉಲ್ಲಂಘಿಸಿ ಅಪಾರ್ಟ್​ಮೆಂಟ್​ ನಿರ್ಮಾಣ ಮಾಡಲಾಗಿತ್ತು. ಸುಪ್ರೀಕೋರ್ಟ್  ಅಪಾರ್ಟ್ ಮೆಂಟ್ ನೆಲಸಮ ಮಾಡುವಂತೆ ಆದೇಶಿಸಿದ  ನಾಲ್ಕು ತಿಂಗಳ ನಂತರ ಕಟ್ಟಡವನ್ನು ನೆಲಸಮಕ್ಕೆ ಸರ್ಕಾರ ಮುಂದಾಗಿದೆ.

ಈ ನಾಲ್ಕು ಅಪಾರ್ಟ್​ಮೆಂಟ್​ಗಳಲ್ಲಿ 350 ಫ್ಲ್ಯಾಟ್‍ಗಳು ಇದ್ದವು. 90 ಫ್ಲ್ಯಾಟ್ ಹೊಂದಿದ್ದ 19 ಫ್ಲೋರ್ ನ 60 ಮೀಟರ್ ಎತ್ತರದ H2O ಹೋಲಿಫೇತ್ ಅಪಾರ್ಟ್​ಮೆಂಟ್​ ಮತ್ತು 73 ಫ್ಲ್ಯಾಟ್ ಹೊಂದಿದ್ದ ಆಲ್ಫಾ ಸಿರೀನ್ ಅಪಾರ್ಟ್​ಮೆಂಟ್​ಗಳ ಧ್ವಂಸವಾಗಿದೆ. ಈ ಅಪಾರ್ಟ್​ಮೆಂಟ್​ಗಳಲ್ಲಿ 240 ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದವು.

ನದಿಯ ಪಕ್ಕ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು,  ಕಾನೂನು ಬಾಹಿರವಾಗಿ  ಕಟ್ಟಡ ನಿರ್ಮಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅಪಾರ್ಟ್​ಮೆಂಟ್​ಗಳ ಧ್ವಂಸಕ್ಕೆ ಸೂಚನೆ ಕೊಟ್ಟಿತ್ತು.ಅಕ್ರಮ ಗಗನಚುಂಬಿ ಕಟ್ಟಡಗಳ ತೆರವಿಗೆ 138 ದಿನಗಳ ಡೆಡ್‍ಲೈನ್ ನೀಡಿತ್ತು.ಕ್ಷಣಾರ್ಧದಲ್ಲಿ ಕಟ್ಟಡಗಳು ನೆಲಕ್ಕುರುಳಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ನೆರೆಹೊರೆಯವನ್ನು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಲಾಗಿತ್ತು. ಅಲ್ಲದೇ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ಮನೆ ಕಳೆದುಕೊಂಡವರಿಗೆ ತಲಾ 25 ಲಕ್ಷ ಪರಿಹಾರ ಕೊಡುವಂತೆ ಕೋರ್ಟ್ ಸೂಚನೆ ನೀಡಿದೆ. ನಾಳೆ ಇನ್ನುಳಿದ ಅಪಾರ್ಟ್ ಮೆಂಟ್ ತೆರವು ಕಾರ್ಯ ನಡೆಯಲಿದೆ.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top