ನವದೆಹಲಿ: 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಡಾ.ವಿಜಯಾ ಅವರು ಆಯ್ಕೆಯಾಗಿದ್ದು, ಅವರ ಕುದಿ ಎಸರು ಕೃತಿ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. 2020 ಫೆಬ್ರುವರಿ 25ರಂದು ಪ್ರಶಸ್ತಿ ನೀಡಲಾಗುವುದು. ಹಿರಿಯ ಸಾಹಿತಿಗಳಾದ ಬಿ.ಆರ್. ಲಕ್ಷ್ಮಣ ರಾವ್, ಡಾ. ನಾ. ದಾಮೋದರ ಶೆಟ್ಟಿ, ಡಾ. ಲತಾ ಗುಟ್ಟಿ ಆಯ್ಕೆ ಸಮಿತಿಯಲ್ಲಿದ್ದರು.