ಡಿವಿಜಿ ಸುದ್ದಿ, ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಕನ್ನಡ ಸಂಘಟನೆಗಳ ಒಕ್ಕೂಟ ಕೆರ ನೀಡಿದ್ದ ನಾಳೆ ಕರ್ನಾಟಕ ಬಂದ್‍ಗೆ ವಿವಿಧ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಬೆಂಗಳೂರಿನ ಟೌನ್‍ಹಾಲ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ ಹೋರಾಟಗಾರರ ಒಕ್ಕೂಟ, ಕರ್ನಾಟಕ ಕ್ರಾಂತಿರಂಗ ಮತ್ತು ಸರ್ವ ಸಂಘಟನೆಗಳ ಒಕ್ಕೂಟ ಟೌನ್ ಹಾಲ್ ಮುಂದೆ ಪ್ರತಿಭಟನೆ ವಿರೋಧಿಸಿ ಪ್ರತಿಭಟನೆ ನಡೆಸಿವೆ. ನಾಳೆ ನಡೆಯುವ ಬಂದ್ ನಮ್ಮ ಬೆಂಬಲವಿಲ್ಲ ಎಂದು ಸರ್ವ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಲಿಂಗೇಗೌಡ ಕಿಡಿಕಾರಿದ್ದಾರೆ.
ಇದೊಂದು ಅವೈಜ್ಞಾನಿಕ ಬಂದ್. ರೈತರಿಗೆ, ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ತೊಂದರೆ ಆಗುವ ಬಂದ್ ಇದು. ಕೆಲ ಸಂಘಟನೆ ಅವರು ತೀರ್ಮಾನ ತಗೊಂಡು ಬಂದ್ ಮಾಡುತ್ತಿದ್ದಾರೆ. ನಮ್ಮನ್ನು ಯಾರು ಕೇಳಿಲ್ಲ, ಕರೆದಿಲ್ಲ ಅವರಷ್ಟೇ ತೀರ್ಮಾನ ಮಾಡಿಕೊಂಡಿದ್ದಾರೆ. ಬಂದ್‍ಗೆ ನಮ್ಮ ಬೆಂಬಲ ಇಲ್ಲ. ಬಂದ್ ಬೇಡಾ ಉದ್ಯೋಗಕ್ಕಾಗಿ ಮಾಡ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಸರೋಜಿನಿ ಮಹಿಷಿ ವರದಿ ಪರಿಷ್ಕೃತ ಆಗಿ ಜಾರಿಗೆ ಬರಬೇಕು ಅಷ್ಟೇ. ನಾಳೆ ಯಾರಾದರೂ ಅಂಗಡಿ ಮುಚ್ಚುಸಿದ್ರೆ, ಬಲವಂತವಾಗಿ ತೊಂದರೆ ಕೊಟ್ಟರೆ ಪರಿಣಾಮ ಸರಿ ಇರಲ್ಲ ಎಂದು ಕರ್ನಾಟಕ ಹೋರಾಟಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಆನಂದ್ ಕುಮಾರ್ ಮಾತನಾಡಿ ಕಿಡಿಕಾರಿದರು.



