ಡಿವಿಜಿ ಸುದ್ದಿ,ಬೆಂಗಳೂರು: ಸರ್ಕಾರದ ಲೆಕ್ಕ ಪತ್ರ ಹಾಗೂ ಲೆಕ್ಕ ಪರಿಶೋಧನೆ ಇಲಾಖೆಯಲ್ಲಿ ಗ್ರೂಪ್ ಎ ಶ್ರೇಣಿಯ 48 ಸಹಾಯಕ ನಿಯಂತ್ರಕರು ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಮೂಲಕ ಅರ್ಜಿ ಆಹ್ವಾನಿಸಿದೆ.
ಒಟ್ಟು 48 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ನಡೆಯಲಿದೆ. ಮೂಲ ವೇತನ 52,650 ಮೂಲ ವೇತನ ಪ್ರಾರಂಭವಾಗಲಿದೆ. ಅಭ್ಯರ್ಥಿಗಳು ಕೆಪಿಎಸ್ ಸಿ ವೆಬ್‌ಸೈಟ್ www.kpsc.kar.nic.in ಲಾಗಿನ್ ಆಗಿ ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮಾ.06 ಅರ್ಜಿ ಸಲ್ಲಿಸುವ ಕೊನೆಯ ದಿನವಾಗಿದೆ. ಮೇ. 24ಕ್ಕೆ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, 2020 ರ ಆಗಸ್ಟ್, ಸೆಪ್ಟೆಂಬರ್ ನಲ್ಲಿ ಮುಖ್ಯ ಪರೀಕ್ಷೆ ನಡೆಯಲಿದೆ.
ಹುದ್ದೆಗಳ ಸಂಖ್ಯೆ: 48
ಮೀಸಲಾತಿ: ಸಾಮಾನ್ಯ–24, ಪ.ಜಾತಿ–7, ಪ.ಪಂಗಡ–02, ಹಿಂದುಳಿದ ವರ್ಗ–15
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂ.ಬಿ.ಎ ಅಥವಾ ಐ.ಸಿ.ಡಬ್ಯೂ.ಎ ವಿದ್ಯಾರ್ಹತೆ ಹೊಂದಿರಬೇಕು.
ವೇತನ ಶ್ರೇಣಿ: ₹ 52,650 ರಿಂದ 97100 ಶ್ರೇಣಿಯಲ್ಲಿ ಸರ್ಕಾರಿ ನಿಯಮಗಳ ಅನುಸಾರ ವೇತನ ನೀಡಲಾಗುವುದು.
ವಯಸ್ಸು
ಕನಿಷ್ಠ 21 ವರ್ಷ
ವಯೋಮಿತಿ
ಸಾಮಾನ್ಯ ವರ್ಗದ ಅಭ್ಯರ್ಥಿಗಳು– ಗರಿಷ್ಠ 35 ವರ್ಷ
ಹಿಂದುಳಿದ ವರ್ಗದ ಅಭ್ಯರ್ಥಿಗಳು– ಗರಿಷ್ಠ 38 ವರ್ಷ
ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು– 40 ವರ್ಷ
ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳು 600
ಹಿಂದುಳಿದ ವರ್ಗದ ಅಭ್ಯರ್ಥಿಗಳು 300
ಮಾಜಿ ಸೈನಿಕರು 50
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಪ್ರೋಸೆಸಿಂಗ್ ಚಾರ್ಜ್ 35
ನೇಮಕಾತಿ
ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಯಲಿದೆ. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯು ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್ ಅನ್ನು ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ
ಆಯೋಗದ ವೆಬ್‌ಸೈಟ್ www.kpsc.kar.nic.in ಲಾಗಿನ್ ಆಗಿ ಅನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 06-03-2020
ಪೂರ್ವಭಾವಿ ಪರೀಕ್ಷಾ ದಿನಾಂಕ : 24-05-2020
ಮುಖ್ಯ ಪರೀಕ್ಷಾ ದಿನಾಂಕ : 2020 ರ ಆಗಸ್ಟ್, ಸೆಪ್ಟೆಂಬರ್
ಕೆಪಿಎಸ್ಸಿ ವೆಬ್ಸೈಟ್: http://www.kpsc.kar.nic.in



