Connect with us

Dvgsuddi Kannada | online news portal | Kannada news online

ಜಾತಕದಲ್ಲಿ( ಕುಂಡಲಿ) ಸಂತಾನಯೋಗ ಫಲ ಮತ್ತು ಪರಿಹಾರ

ಜ್ಯೋತಿಷ್ಯ

ಜಾತಕದಲ್ಲಿ( ಕುಂಡಲಿ) ಸಂತಾನಯೋಗ ಫಲ ಮತ್ತು ಪರಿಹಾರ

ಓಂ ಶ್ರೀ ಸಂತಾನಲಕ್ಷ್ಮಿ ಪಾದ ಪಂಕಜಂ
ಜೀವನದಲ್ಲಿ ಒಂದೇ ಒಂದು ಸಾರಿ ಮದುವೆ ಆಗುತ್ತದೆ. ಮದುವೆ ಕ್ಷಣದಿಂದ ತುಂಬಾ ಉಲ್ಲಾಸ ಜೀವನ ಮಾಡುತ್ತೀರಿ, ನಂತರ ಎರಡು ವರ್ಷ ,ಮೂರು ವರ್ಷ ಕಳೆದು ಹೋಗುತ್ತದೆ. ನಂತರ ನಿಮಗೆ ಮಕ್ಕಳಿಲ್ಲದ ಸಂಕಟ ಪ್ರಾರಂಭವಾಗುತ್ತದೆ. ಆಗ ನೀವು ಆ ದೇವರು ದರ್ಶನ, ವೈದ್ಯರ ಭೇಟಿ ಮಾಡಲು ಪ್ರಾರಂಭಿಸುತ್ತೀರಿ.

ವೈದ್ಯರು ಕೆಲವು ವೈದ್ಯಕೀಯ ಪರೀಕ್ಷೆಗಳು ನಡೆಸುತ್ತಾರೆ . ಅದರಲ್ಲಿ ಯಾವುದೇ ತರಹದ ನ್ಯೂನ್ಯತೆ ಕಾಣುವುದಿಲ್ಲ . ಎಲ್ಲ ನಿಮ್ಮ ಆರೋಗ್ಯ ಚೆನ್ನಾಗಿದೆ ಹೌಷಧಿ ತಗೊಳ್ಳಿ ಅಂತ ಸಲಹೆ ನೀಡುತ್ತಾರೆ. ಆದ್ರೂ ನಿರಾಶೆ ಆಗುವ ಸಾಧ್ಯತೆ. ಆಗ ತಮಗೆ ಸಹಾಯಸ್ತ ನೀಡುವುದು ದೈವ ಭಾಗ್ಯ ಅದೇ ಜನ್ಮಜಾತಕ ಅಥವಾ ಜನ್ಮ ಕುಂಡಲಿ.

ತಮ್ಮ ಜನ್ಮಕುಂಡಲಿ ಪರೀಕ್ಷಿಸಬೇಕು. ಅದರಲ್ಲಿ ಲಗ್ನದಿಂದ ಪಂಚಮ ಸ್ಥಾನ ನೋಡಿ ಸರಿಯಾಗಿ ಪರೀಕ್ಷಿಸಬೇಕು.ಪಂಚಮ ಸ್ಥಾನಕ್ಕೆ ಯಾರು ಅಧಿಪತಿ ಇದ್ದಾನೆ ,ಶುಭಗ್ರಹಗಳು ನೋಡಬೇಕು. ಲಗ್ನಾಧಿಪತಿ ಮತ್ತು ಪಂಚಮಾಧಿಪತಿಯು ಏಕರಾಶಿಯಲ್ಲಿ ಕೂಡಿರಬೇಕು. ಒಳ್ಳೆ ದೃಷ್ಟಿಯಿಂದ ಕೂಡಿಕೊಂಡಿರಬೇಕು. ಲಗ್ನಾಧಿಪತಿ ಮತ್ತು ಪಂಚಮಾಧಿಪತಿಯು ಯಾವುದೇ ಕಾರಣಕ್ಕೂ ಪರಿವರ್ತನೆಯಾಗಿ ಇರಬಾರದು, ದಂಪತಿಗಳಿಗೆ ಸಂತಾನಭಾಗ್ಯ ಲಭಿಸುತ್ತದೆ.ಲಗ್ನ ಸ್ಥಾನದಲ್ಲಿ ಗುರು ಮತ್ತು ಪಂಚಮ ಸ್ಥಾನದಲ್ಲಿ ಗುರುಬಲ ಇದ್ದರೆ ಸಂತತಿ ಭಾಗ್ಯ ಲಭಿಸುತ್ತದೆ.

ಪಂಚಮ ಭಾವದಲ್ಲಿ ಪಾಪ ಗ್ರಹಗಳು ಇದ್ದರೆ ಅವರಿಗೆ ಸಂತತಿ ಆಗುವುದಿಲ್ಲ. ಪಂಚಮಾಧಿಪತಿ ನಿಶಕ್ತ ನಾಗಿದ್ದರೂ ಕೂಡ ಸಂತಾನಭಾಗ್ಯ ಇರುವುದಿಲ್ಲ.
ರವಿ ಗ್ರಹವು ವೃಶ್ಚಿಕ ರಾಶಿ ವೃಷಭ ಕನ್ಯಾ ರಾಶಿಲ್ಲಿರುವಾಗ ಇದು ಪಂಚಮ ಭಾವವಾಗಿ ಎಂಟರಲ್ಲಿ ಶನಿ ಲಗ್ನದಲ್ಲಿ ಮಂಗಳನಿದ್ದರೆ ಇವರಿಗೆ ಬಹಳ ತಡವಾಗಿ ಮಕ್ಕಳ ಭಾಗ್ಯ ಲಭಿಸಲಿದೆ.ಲಗ್ನದಲ್ಲಿ ಪಾಪಗ್ರಹ ಇದ್ದರೆ, ಪಂಚಮಾಧಿಪತಿಯು ಮೂರನೇ ಸ್ಥಾನ 4ನೇ ಸ್ಥಾನ ಚಂದ್ರನೊಂದಿಗೆ ಇದ್ದರೆ ಲಗ್ನಾಧಿಪತಿಯು ಪಂಚಮದಲ್ಲಿದ್ದರೆ ಇಂತಹವರಿಗೆ ಮಕ್ಕಳಾಗುವುದಿಲ್ಲ.

ಸಂತಾನಭಾಗ್ಯ ಲಭಿಸಲು ಪೂಜಾ ಮತ್ತು ಪರಿಹಾರ
1)ನವಗ್ರಹ ಶಾಂತಿ ಮಾಡಿಸಿರಿ
2) ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆ ಪಿತೃಕಾರ್ಯ ಮಾಡಿರಿ.
3) ದ್ವಾದಶಿ ತಿಥಿಯಲ್ಲಿ ಅನ್ನದಾನ ,ಬ್ರಾಹ್ಮಣ ಪೂಜಾರಿಗೆ ನವಧಾನ್ಯ ಸಂತರ್ಪಣೆ ಮಾಡಿರಿ.
4) ಚತುರ್ದಶಿ ತಿಥಿಯಲ್ಲಿ ರುದ್ರಾಭಿಷೇಕ ಮಾಡಿಸಿ
5) ಅಷ್ಟಮಿ ತಿಥಿಯಲ್ಲಿ ಶ್ರವಣ ಉಪವಾಸಮಾಡಿ ಮಾಡಿರಿ.
6) ನವಮಿ ತಿಥಿಯಲ್ಲಿ ರಾಮಾಯಣ ಪುರಾಣ ಓದಿರಿ.
7) ಚತುರ್ಥಿ ತಿಥಿ ದಿನದಂದು ನಾಗ ದೇವತೆಯ ಆರಾಧನೆ ಮಾಡಿರಿ.
8) ಸಂತಾನ ದೋಷವುಳ್ಳವರು ಷಷ್ಠಿ ತಿಥಿಯಾದರೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಆರಾಧಿಸಿರಿ.
ಶುಭಮಸ್ತು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top