Connect with us

Dvgsuddi Kannada | online news portal | Kannada news online

ಭವಿಷ್ಯದಲ್ಲಿ ಅಮೆರಿಕ ಕರಾಳ ದಿನ ಎದುರಿಸಲಿದೆ : ಸುಲೇಮಾನಿ ಪುತ್ರಿ ಎಚ್ಚರಿಕೆ

ಅಂತರಾಷ್ಟ್ರೀಯ ಸುದ್ದಿ

ಭವಿಷ್ಯದಲ್ಲಿ ಅಮೆರಿಕ ಕರಾಳ ದಿನ ಎದುರಿಸಲಿದೆ : ಸುಲೇಮಾನಿ ಪುತ್ರಿ ಎಚ್ಚರಿಕೆ

ಟೆಹರಾನ್‌: ಅಮೆರಿಕ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಇರಾನ್‌ ಸೇನೆಯ ಪ್ರಮುಖ ಕಮಾಂಡಂರ್‌ ಖಾಸಿಮ್ ಸುಲೇಮಾನಿ ಅವರ ಅಂತ್ಯಕ್ರಿಯೆ ಸೋಮವಾರ ನಡೆದಿದ್ದು, ಈ ಸಾವಿಗೆ ಅಮೆರಿಕಾ ಮುಂದಿನ ದಿನಗಳಲ್ಲಿ ಕರಾಳ ದಿನಗಳನ್ನು ಎದುರಿಸಲಿದೆ ಎಂದು ಸುಲೇಮಾನಿ ಪುತ್ರಿ ಝೀನಾಬ್‌ ಸುಲೇಮಾನಿ ಎಚ್ಚರಿಕೆ ನೀಡಿದ್ದಾಳೆ .

ಅಂತ್ಯಕ್ರಿಯೆಗೆ  ಭಾರೀ ಜನ ಸಂಖ್ಯೆಯಲ್ಲಿ ಜನರು ಸೇರಿದ್ದು, ಸುಲೇಮಾನಿ ಮೇಲಿದ್ದ ಅಭಿಮಾನಕ್ಕೆ  ಸಾಕ್ಷಿಯಾಂತೆ ಇತ್ತು. ಸರಕಾರಿ ಟೆಲಿವಿಷನ್‌ ಮೂಲಕ ಭಾಷಣ ಮಾಡಿದ ಝೀನಾಬ್‌ ಅಮೆರಿಕಕ್ಕೆ ಅದರಲ್ಲೂ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ನೇರವಾಗಿ ಸವಾಲು ಹಾಕಿದ್ದಾರೆ. “ಕ್ರೇಜಿ ಟ್ರಂಪ್‌, ನನ್ನ ತಂದೆಯ ಮರಣ ನಂತರ ಎಲ್ಲವೂ ಮುಗಿದು ಹೋಯಿತು ಎಂದುಕೊಳ್ಳಬೇಡ. ಮುಂದಿನ ದಿನಗಳಲ್ಲಿ ಇದಕ್ಕೆ  ತಕ್ಕ ಪ್ರತಿಕ್ರಿಯೆ ಕಾದಿದ್ದು, ಅಮೆರಿಕಕ್ಕೆ ಕರಾಳ ದಿನ ಎದುರಿಸಲಿದೆ ಎಂದು ಸುಲೇಮಾನಿ ಪುತ್ರಿ ಗುಡುಗಿದ್ದಾರೆ.

ಸುಲೇಮಾನಿ ಹತ್ಯೆಯ ನಂತರ ಅಮೆರಿಕ ಮತ್ತು ಇರಾನ್‌ ನಡುವಿನ ಯುದ್ಧದ ವಾತಾವಣ ನಿರ್ಮಾಣವಾಗಿದ್ದು, ಸುಲೇಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್‌ ತಂತ್ರ ರೂಪಿಸಿದೆ. ಅಮೆರಿಕಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ.  ಅಮೆರಿಕದ ಮೇಲೆ ದಾಳಿ ನಡೆಸಲು ಸುಮಾರು 35 ತಾಣಗಳನ್ನು ಇರಾನ್‌ ಗುರುತಿಸಿದೆ ಎಂದು ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ ಡೊನಾಲ್ಡ್‌ ಟ್ರಂಪ್‌ ಕೂಡ ಇರಾನ್‌ನ 52 ಪ್ರದೇಶಗಳನ್ನು ದಾಳಿಗೆ ಗುರಿಯಾಗಿಸಿದೆ ಎಂದು ಹೇಳಲಾಗುತ್ತಿದೆ.

Continue Reading
Advertisement
You may also like...

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಅಂತರಾಷ್ಟ್ರೀಯ ಸುದ್ದಿ

To Top