Connect with us

Dvgsuddi Kannada | online news portal | Kannada news online

ಭಾರತದಿಂದ ಅಮೆರಿಕಕ್ಕೆ ಔಷಧಿ ರಫ್ತು: ಪ್ರಧಾನಿ ಮೋದಿ ಗುಣಗಾನ ಮಾಡಿದ ಟ್ರಂಪ್

ಪ್ರಮುಖ ಸುದ್ದಿ

ಭಾರತದಿಂದ ಅಮೆರಿಕಕ್ಕೆ ಔಷಧಿ ರಫ್ತು: ಪ್ರಧಾನಿ ಮೋದಿ ಗುಣಗಾನ ಮಾಡಿದ ಟ್ರಂಪ್

ವಾಷಿಂಗ್ಟನ್‌: ಔಷಧಿ ರಫ್ತು ನಿಷೇಧಕ್ಕೆ ಭಾರತಕ್ಕೆ ಪ್ರತೀಕಾರದ ಬೆದರಿಕೆ ಹಾಕಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇಂದು ಯುಟರ್ನ್ ಹೊಡೆದಿದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡಿದ್ದಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಸೇರಿದಂತೆ ವಿವಿಧ 24 ಬಗೆಯ ಔಷಧಿಗಳು ಅಮೆರಿಕಕ್ಕೆ ರಫ್ತಾಗಿರುವ ವಿಷಯ ತಿಳಿಯುತ್ತಿದ್ದಂತೆ ಡೊನಾಲ್ಡ್‌ ಟ್ರಂಪ್‌ ಮೋದಿಯವರನ್ನು ಹೊಗಳಿದ್ದಾರೆ. ಒಟ್ಟು 2.9ಕೋಟಿ ಔಷಧಿಯ ಡೊಸೇಜ್‌ ರಫ್ತಾಗಿದ್ದು  ಅಮೆರಿಕ ತಲುಪಲಿದೆ.

ಅಮೆರಿಕದಲ್ಲಿ ಕೊರೊನಾ  ಮಹಾಮಾರಿಗೆ  ಇಲ್ಲಿಯವರೆಗೂ 4 ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದು , 13 ಸಾವಿರ ಜನರು ಮೃತಪಟ್ಟಿದ್ದಾರೆ. ಟ್ರಂಪ್‌ ಸರ್ಕಾರ ಸೋಂಕಿತರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ನೀಡಲು ಸೂಚಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ ಇಷ್ಟು ಪ್ರಮಾಣದ ಔಷಧಿಯನ್ನು ತರಿಸಿದ್ದೇನೆ. ಮೋದಿ ಒಳ್ಳೆಯವರು, ಅವರು ತುಂಬಾ ಗ್ರೇಟ್‌ ಎಂದಿದ್ದಾರೆ.

ಸೋಮವಾರವಷ್ಟೇ ಭಾರತ ತನ್ನ ರಫ್ತು ನಿಷೇಧ ನಿಲುವು ಸಡಿಲಿಸಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ರಫ್ತು ಮಾಡಬೇಕು, ಇಲ್ಲವಾದಲ್ಲಿ ವಾಣಿಜ್ಯ ಪ್ರತೀಕಾರವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.ಭಾರತ ಈ ಸಹಾಯ ಮಾಡಿದ ಹಿನ್ನೆಲೆ ಇದೀಗ ಟ್ರಂಪ್ ಹೊಗಳಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top