ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಉಚ್ಚoಗಿದುರ್ಗಕ್ಕೆ ಜಿಲ್ಲಾಧಿಕಾರಿ ನಕುಲ್ ಭೇಟಿ ನೀಡಿ ಆಸ್ಪತ್ರೆಯ ಸ್ಥಿತಿಗತಿ ಪರಿಶೀಲನೆ ನಡೆಸಿದರು.
ಈ ವೇಳೆ ಗ್ರಾಮಸ್ಥರು ಕಳೆದ ಒಂದು ವರ್ಷಗಳಿಂದ ಆಸ್ಪತ್ರೆಗೆ ವೈದ್ಯರ ನೇಮಕವಾಗಿಲ್ಲ. ಹೋಬಳಿಯ ಅತೀ ದೊಡ್ಡ ಗ್ರಾಮ ಪಂಚಾಯಿತಿ ಇದಾಗಿದ್ದು, ಐತಿಹಾಸಿಕ ಹಿನ್ನೆಲೆಯ ಉಚ್ಚೆಂಗೆಮ್ಮ ದೇವಿ ದರ್ಶನಕ್ಕೆ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಗಳಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಬರುವ ಭಕ್ತರಿಗೆ ವೈದ್ಯಕೀಯ ಚಿಕತ್ಸೆ ನೀಡಲು ವೈದ್ಯರಿಲ್ಲ. ಸಿಬ್ಬಂಧಿಗಳ ಕೊರತೆಯ ಕುರಿತು ಈಗಾಗಲೇ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕೊಡಲೇ ನೇಮಕ ಮಾಡುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿಲ್ಲೆಯಾದ್ಯಂತ ವೈದ್ಯರ ಕೊರತೆ ಇದೆ. ಸ್ಥಳೀಯವಾಗಿ ನುರಿತ ವೈದ್ಯರು ಆಸ್ಪತ್ರೆ ಸೇವೆಗೆ ಸೇರಲು ಬಯಸಿದ್ದಲ್ಲಿ ನಿಯೋಜನೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅಸ್ಪತ್ರೆ ಕುಂದುಕೊರತೆ, ಅಂಬ್ಯುಲೆನ್ಸ್ ಕುರಿತು ಶೀಘ್ರ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯೆಕ್ಷೆ ಅಶ್ವಿನಿ ಎಂ.ಎಂ ಚಂದ್ರಪ್ಪ, ಎಂ. ಕುಮಾರ, ಶಿವನಗೌಡ, ಸಿದ್ದಪ್ಪ, ಪ್ರಕಾಶ್, ಕರಿಬಸಪ್ಪ, ಕೊಟ್ರಮ್ಮ, ಹಾಲೇಶ್ ಪಿಡಿಒ ಉಮೇಶ್ ಇದ್ದರು.



