Connect with us

Dvgsuddi Kannada | online news portal | Kannada news online

ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳಲು ಕುಡಿಯಿರಿ ಸೋರೆಕಾಯಿ ಜ್ಯೂಸ್..!

ಆರೋಗ್ಯ

ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳಲು ಕುಡಿಯಿರಿ ಸೋರೆಕಾಯಿ ಜ್ಯೂಸ್..!

ಕೆಲವು ಕಡೆಗಳಲ್ಲಿ ಸೋರೆಕಾಯಿ ಎಂದು ಕರೆಯಲಾಗುವ ಸಾಮಾನ್ಯ ತರಕಾರಿ ಬಾಟಲ್ ಗಾರ್ಡ್. ಇದನ್ನು ಇನ್ನು ಕೆಲವು ಕಡೆ ಹಾಲುಕುಂಬಳಕಾಯಿ ಎಂದು ಕರೆಯುತ್ತಾರೆ. ಇದು ಹೆಚ್ಚು ನೀರಿನಂಶದಿಂದ ಕೂಡಿರುವಂತಹ ತರಕಾರಿಯಾಗಿದ್ದು ದೇಹದಲ್ಲಿನ ಉಷ್ಣತೆ ಕಡಿಮೆ ಮಾಡಿಮೆ ಮಾಡುತ್ತಿದೆ.  ಇದೊಂದು ದೇಹಕ್ಕೆ  ತಂಪು ನೀಡುವ ತರಕಾರಿಯಾಗಿದೆ.

ಇದು ಸಾಮಾನ್ಯ ತರಕಾರಿಯಾದರೂ ಆರೋಗ್ಯಕ್ಕೆ ಅನುಕೂಲಕಾರಿ ಗುಣಗಳನ್ನು ಹೊಂದಿದೆ. ಇದನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಉಷ್ಣ ದೇಹ ತಣ್ಣಗಾಗುವುದರ ಜೊತೆಗೆ ಸೂರ್ಯಾಘಾತದ ಸಮಸ್ಯೆಗಳು ಕಡಿಮೆಯಾಗಲು ಸಹಾಯವಾಗುತ್ತದೆ. ಅಷ್ಟೇ ಅಲ್ಲದೆ ಇದು ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಬಿ, ವಿಟಮಿನ್ ಎ, ಹಾಗೂ ವಿಟಮಿನ್ ಈ, ಕಬ್ಬಿಣ, ಫೋಲೇಟ್, ಪಾಸ್ಪರಸ್ ಮತ್ತು ಮ್ಯಾಂಗನೀಸ್ ಇನ್ನು ಮುಂತಾದ ಅಂಶಗಳನ್ನು ಹೊಂದಿದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು, ದೇಹವನ್ನು ನಿರ್ಜಲೀಕರಣವಾಗದಂತೆ ತಡೆಯಲು, ತೂಕವನ್ನು ಕಡಿಮೆ ಮಾಡಲು, ಜೀರ್ಣಶಕ್ತಿಯನ್ನು ಹೆಚ್ಚಿಸಲು, ಮಾನಸಿಕ ಹಾಗೂ ಶಾರೀರಿಕ ಒತ್ತಡವನ್ನು ಕಡಿಮೆ ಮಾಡಲು ಸೋರೆಕಾಯಿ ಸಹಕಾರಿಯಾಗಿದ್ದು, ಬೇಸಿಗೆಯಲ್ಲಿ ಮಕ್ಕಳಿಗೆ ಇದರ ಜ್ಯೂಸ್ ಮಾಡಿ ಕೊಡುವುದು ಉತ್ತಮ. ಬೇಕಾದಲ್ಲಿ ನೆಲ್ಲಿಕಾಯಿ, ಶುಂಠಿ, ಲಿಂಬೆರಸ ಸೇರಿಸಿ ಜ್ಯೂಸ್ ಮಾಡಿಕೊಳ್ಳಬಹುದು. ಇದರಿಂದ ಕುಡಿಯಲು ರುಚಿಯಾಗಿಯೂ ಇರುತ್ತದೆ ಮತ್ತು ಇನ್ನಷ್ಟು ಆರೋಗ್ಯ ಸಹಕಾರಿ ಗುಣಗಳು ದೇಹವನ್ನು ಸೇರಲು ಸಾಧ್ಯವಾಗುತ್ತದೆ.

ವಿಟಮಿನ್ ಸಿ ಹಾಗೂ ವಿಟಮಿನ್ ಎ ಇವು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬೇಸಿಗೆಯಲ್ಲಿ ಕಾಡಬಹುದಾದ ಚರ್ಮ ಸಂಬಂಧಿತ ಸಮಸ್ಯೆಗಳಿಂದ ರಕ್ಷಣೆ ಸಿಗಲು ಹಾಗೂ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಸೋಂಕುಗಳಿಂದ ದೂರವಿರಲು ಇದರ ಸೇವನೆಯು ಅಂತ್ಯಂತ ಅನುಕೂಲಕಾರಿಯಾಗುತ್ತದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಆರೋಗ್ಯ

To Top